LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ಎಲ್ಲ ೪೮ ತಂಡಗಳ ರೋಸ್ಟರ್ಸ್ ಬಿಡುಗಡೆ

ಜೂನ್ ೧೧ ರಂದು ಆರಂಭ: ಜುಲೈ ೧೯ ರಂದು ಫೈನಲ್ ಪಂದ್ಯ

Advertisement


ಜೂನ್ ೧೧ ರಂದು ಆರಂಭವಾಗುವ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ಇಂದು (ಫೀಪಾ) ವಿಶ್ವ ಫುಟ್‌ಬಾಲ್ ಫೆಡರೇಷನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲ ೪೮ ತಂಡಗಳ ರೋಸ್ಟರ್ಸ್(ತಂಡಗಳ ಸದಸ್ಯರ ಪಟ್ಟಿ)ಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ ಹಾಗೂ ಕೆನಡಾ ದೇಶಗಳಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಗೆ ೩೫೭ ಆಟಗಾರರು ಹಳಬರಾಗಿದ್ದು, ೮೯೧ ಆಟಗಾರರು ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಒಟ್ಟು ೭೧ ದೇಶಗಳ ೪೪೯ ಕ್ಲಬ್ ಆಟಗಾರರು ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ೨೫ ವರ್ಷಕ್ಕೂ ಹೆಚ್ಚು ಕಾಲದಿಂದ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಭಾಗವಹಿಸುತ್ತಿರುವ ತೀರಾ ಹಳೆಯ ಆಟಗಾರರ ಹೆಸರುಗಳನ್ನು ಪ್ರತ್ಯೇಕಿಸಿ ಫೀಪಾ ಪಟ್ಟಿ ಹೊರಡಿಸಿದೆ. ಇದರಲ್ಲಿ ಸ್ಕಾಟ್ಲೆಂಡ್‌ನ ಕ್ರೇಗ್ ಗೋರ್ಡೋನ್ ೪೩ ವರ್ಷ ೧೬೨ ದಿನಗಳ ವಯಸ್ಸಿನ ಆಟಗಾರ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. 
ಮೆಕ್ಸಿಕೋದ ಗಿಲ್ಬೇರ್ಟೋ ಮೋರಾ ಅತಿ ಚಿಕ್ಕ ಆಟಗಾರನಾಗಿದ್ದು, ಆ ಆಟಗಾರನ ವಯಸ್ಸು ೧೭ ವರ್ಷ ೨೪೦ ದಿನ
ಪ್ರತಿ ತಂಡದಲ್ಲಿ ೨೬ ಆಟಗಾರರು: ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ೪೮ ದೇಶಗಳ ತಂಡದಲ್ಲಿ ತಲಾ ೨೬ 
ಆಟಗಾರರು ಇದ್ದು, ಒಟ್ಟು ೧, ೨೪೮ ಆಟಗಾರರ ಹೆಸರುಗಳನ್ನು ಫೀಪಾ ಬಿಡುಗಡೆ ಮಾಡಿದೆ.
ಬದಲಾವಣೆಗೆ ಅವಕಾಶ: ಪ್ರತಿ ತಂಡದ ಆಟಗಾರರನ್ನು ಬದಲಿಸಿಕೊಳ್ಳಲು ಎಲ್ಲ ತಂಡಗಳಿಗೆ ಈಗಲೂ ಅವಕಾಶ ಇದೆ. ಆದರೆ ಈಗ ಬಿಡುಗಡೆಗೊಳಿಸಿರುವ ಆಟಗಾರರಲ್ಲಿ ಯಾರಾದರೂ ಗಂಭೀರವಾಗಿ ಗಾಯಗೊಂಡರೇ ಮಾತ್ರ. ಅಂದರೆ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಮೊದಲ ಪಂದ್ಯ ಆರಂಭಕ್ಕೂ ೨೪ ಗಂಟೆ ಮುನ್ನ ಆಟಗಾರರ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಜೂನ್ ೧೧ ರಂದು ಪಂದ್ಯಾವಳಿ ಆರಂಭವಾಗಿ ಜುಲೈ ೧೯ ರಂದು ಫೈನಲ್ ಪಂದ್ಯ ನಡೆಯಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST