LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ನನಗೂ ಮಂತ್ರಿಯಾಗುವ ಅರ್ಹತೆ ಇದೆ ಆಸೆಯೂ ಇದೆ : ವಿಜಯಾನಂದ ಕಾಶಪ್ಪನವರ್ 

Advertisement
ಬೆಂಗಳೂರು : ಮುಂಬರುವ ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದ್ದು, ಬಹುದೊಡ್ಡ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ, ಇದೀಗ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ನನಗೂ ಮಂತ್ರಿಯಾಗುವ ಅರ್ಹತೆ ಇದೆ ಆಸೆಯೂ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರು ಅವರು ಪ್ರತಿಕ್ರಿಯೆ ನೀಡಿದ್ದು, ಕೆ.ಎನ್ ರಾಜಣ್ಣ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಇಂತಹ ಊಹಾಪೋಹಗಳನ್ನು ಯಾರು ಶುರು ಮಾಡಿದ್ದಾರೆ ಗೊತ್ತಿಲ್ಲ.

ಇದಕ್ಕೆ ಕಡಿವಾಣ ಹಾಕುವುದಕ್ಕೆ ಆಗಲ್ಲ ಇದೆಲ್ಲದರ ಕುರಿತು ವರಿಷ್ಠರು ನಿರ್ಧರಿಸುತ್ತಾರೆ. ನನಗೂ ಮಂತ್ರಿ ಆಗಬೇಕು ಎಂಬ ಆಸೆ ಇದೆ.

ನನಗೆ ಮಂತ್ರಿ ಆಗುವ ಅವಕಾಶ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ನನಗೂ ಆಸೆ ಇದೆ ಅರ್ಹತೆ ಇದೆ ಎಂದು ಎದೆ ಬೆಳೆ ವಿಜಯಾನಂದ ಕಾಶಪ್ಪನವರ್ ತಮ್ಮ ಮಂತ್ರಿ ಆಗುವ ಕನಸು ಬಿಚ್ಚಿಟ್ಟಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST