LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಳಗಾವಿಯಲ್ಲಿ ಘೋರ ದುರಂತ : ನೇಣು ಬಿಗಿದುಕೊಂಡು ಮಗುವಿನ ಜೊತೆ ತಾಯಿ ಆತ್ಮಹತ್ಯೆ

Advertisement

ಬೆಳಗಾವಿ : ಘೋರವಾದ ದುರಂತ ಒಂದು ಸಂಭವಿಸಿದ್ದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮಗುವಿನ ಜೊತೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ವೀರನವಾಡಿ ಗ್ರಾಮದಲ್ಲಿ ನಡೆದಿದೆ..

ಮನೆಯಲ್ಲಿ ನೇಣು ಬಿಗಿದುಕೊಂಡು ಮಗ ಭುವನ್ ಜೊತೆಗೆ ತಾಯಿ ಪ್ರೇಮ (28) ಆತ್ಮಹತ್ಯೆ ಶರಣಾಗಿದ್ದಾರೆ ಗಂಡನ ಮನೆಯವರು ಮಾಡಿದ ಸಾಲ ತುಂಬವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಗಂಡ ಅತ್ತೆ ಮೈದುನ ಸೇರಿದಂತೆ ಆರು ಜನರ ವಿರುದ್ಧ ನಿರಂತರವಾಗಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತು ಪ್ರೇಮ ಮನೆಯಲ್ಲಿಯೇ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಗಂಡ ಅತ್ತೆ ಸೇರಿ ಆರು ಜನರ ವಿರುದ್ಧ ಮತದ ಕುಟುಂಬದ ಸದಸ್ಯರು ದೂರು ನೀಡಿದ್ದಾರೆ. ಗಂಡ ನಾಗೇಶ್ ತಳವಾರ್, ಅತ್ತೆ ಸುಶೀಲ ತಳವಾರ್ ಹಾಗು ಮೈದುನ ಪರಶುರಾಮ ತಳವಾರ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST