LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಇರಾನ್ ವಿರುದ್ಧದ ಯುದ್ಧ ಈಗ "ಅಂತ್ಯಗೊಂಡಿದೆ": ಟ್ರಂಪ್ ಘೋಷಣೆ

Advertisement

ವಾಷಿಂಗ್ಟನ್: ಕಳೆದ ಕೆಲವು ಸಮಯದಿಂದ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಈಗ ಸಂಪೂರ್ಣವಾಗಿ ಸರಿದಿದೆ. ಇರಾನ್ ವಿರುದ್ಧದ ಯುದ್ಧ ಈಗ "ಅಂತ್ಯಗೊಂಡಿದೆ" (Terminated) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

​ಈ ಕುರಿತು ಅಮೆರಿಕದ ಸಂಸತ್ತಿಗೆ (ಕಾಂಗ್ರೆಸ್) ಪತ್ರ ಬರೆದಿರುವ ಅವರು, ಇತ್ತೀಚಿನ ಕದನ ವಿರಾಮವು ಯಶಸ್ವಿಯಾಗಿ ಮುಂದುವರಿಯುತ್ತಿರುವುದರಿಂದ ಈ ಮಹತ್ವದ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

"ಇರಾನ್ ವಿರುದ್ಧದ ಸಂಘರ್ಷ ಮತ್ತು ಆಕ್ರಮಣಕಾರಿ ಪರಿಸ್ಥಿತಿಯನ್ನು ನಾವು ಈಗ ಅಂತ್ಯಗೊಳಿಸಿದ್ದೇವೆ" ಎಂದು ಟ್ರಂಪ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ಕದನ ವಿರಾಮವು ಯಶಸ್ವಿಯಾಗಿ ಪಾಲನೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ನಿರ್ಧಾರವು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಯುದ್ಧದ ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಆ ಭಾಗದಲ್ಲಿರುವ ಅಮೆರಿಕನ್ ಪಡೆಗಳ ನಿಯೋಜನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST