LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗಗನಕ್ಕೇರಿದ ಅಡುಗೆ ಎಣ್ಣೆಯ ಬೆಲೆ 

Advertisement

ನವದೆಹಲಿ : ಈಗಾಗಲೇ ಗಗನಕ್ಕೇರಿರುವ ಅಡುಗೆ ಅನಿಲ ಮತ್ತು ತರಕಾರಿ ಬೆಲೆಗಳಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಈಗ ಅಡುಗೆ ಎಣ್ಣೆಯ ಬೆಲೆ ಏರಿಕೆ 'ಗಾಯದ ಮೇಲೆ ಬರೆ ಎಳೆದಂತೆ' ಪರಿಣಮಿಸಿದೆ. 

ಕಳೆದ ಒಂದು ತಿಂಗಳ ಅವಧಿಯಲ್ಲೇ ಅಡುಗೆ ಎಣ್ಣೆಯ ದರ ಸುಮಾರು ಶೇಕಡಾ 22 ರಷ್ಟು ಹೆಚ್ಚಳವಾಗಿದ್ದು, ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಬಜೆಟ್ ಪೂರ್ಣವಾಗಿ ಏರುಪೇರಾಗಿದೆ.

ಜಾಗತಿಕ ವಿದ್ಯಮಾನಗಳು ಅಡುಗೆ ಮನೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಸನ್‌ಫ್ಲವರ್ ಎಣ್ಣೆಯ ಆಮದಿಗಾಗಿ ಭಾರತವು ಪ್ರಮುಖವಾಗಿ ಉಕ್ರೇನ್ ಮತ್ತು ರಷ್ಯಾವನ್ನು ಅವಲಂಬಿಸಿದೆ.

 ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಅಂತರಾಷ್ಟ್ರೀಯ ಬಿಕ್ಕಟ್ಟು ತಿಳಿಯಾಗುವವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಒಂದೆಡೆ ಪೂರೈಕೆಯ ಕೊರತೆಯಿದ್ದರೆ, ಮತ್ತೊಂದೆಡೆ ಕೆಲವು ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಲಾಭದ ಆಸೆಗೆ ಎಣ್ಣೆಯನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಕಂಪನಿಗಳ ಅಸಲಿ ಮಾರಾಟದ ಬೆಲೆ 750 ರಿಂದ 960 ರೂಪಾಯಿಗಳಿದ್ದರೂ, ಪ್ಯಾಕೆಟ್ ಮೇಲೆ 1118 ರೂಪಾಯಿಗಳವರೆಗೆ ಹೆಚ್ಚಿನ ಎಂಆರ್‌ಪಿ ಮುದ್ರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡಲಾಗುತ್ತಿದೆ.

ಪರ್ಯಾಯ ಮಾರ್ಗ ಹುಡುಕುತ್ತಿರುವ ಗ್ರಾಹಕರು

ಸನ್‌ಫ್ಲವರ್ ಎಣ್ಣೆಯ ಬೆಲೆ ಭರಿಸಲಾಗದೆ ಅನೇಕ ಗ್ರಾಹಕರು ಈಗ ತುಸು ಕಡಿಮೆ ದರಕ್ಕೆ ಸಿಗುವ ರೈಸ್ ಬ್ರಾನ್ ಮತ್ತು ಸೋಯಾಬೀನ್ ಎಣ್ಣೆಗಳ ಮೊರೆ ಹೋಗುತ್ತಿದ್ದಾರೆ. ಸರ್ಕಾರದ ಸೂಕ್ತ ನಿಗಾ ಇಲ್ಲದಿರುವುದು ಮತ್ತು ನಿಯಂತ್ರಣ ತಪ್ಪಿದ ಮಾರುಕಟ್ಟೆ ವ್ಯವಸ್ಥೆಯು ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

 

ಬೆಲೆ ಏರಿಕೆಯ ಬಿಸಿ: ಪ್ರಮುಖ ಎಣ್ಣೆಗಳ ಇಂದಿನ ದರ ಪಟ್ಟಿ

ವಿವಿಧ ಜಿಲ್ಲೆಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ ಸರಾಸರಿ 15 ರಿಂದ 30 ರೂಪಾಯಿಗಳವರೆಗೆ ಏರಿಕೆಯಾಗಿದೆ. ಪ್ರಮುಖ ಎಣ್ಣೆಗಳ ಬೆಲೆ ವಿವರ ಈ ಕೆಳಗಿನಂತಿದೆ:

 

ಅಡುಗೆ ಎಣ್ಣೆಯ ವಿಧ ಹಳೆಯ ದರ (ಲೀಟರ್‌ಗೆ) ಹೊಸ ದರ (ಲೀಟರ್‌ಗೆ)

ಸನ್‌ಫ್ಲವರ್ ಆಯಿಲ್ ₹ 180 ₹ 200

ಪಾಮ್ ಆಯಿಲ್ ₹ 120 ₹ 145

ಸೋಯಾಬೀನ್ ಎಣ್ಣೆ ₹ 150 ₹ 170

ಸಾಸಿವೆ ಎಣ್ಣೆ ₹ 130 ₹ 160

ವನಸ್ಪತಿ ₹ 130 ₹ 160

ರೈಸ್ ಬ್ರಾನ್ ಎಣ್ಣೆ ₹ 150 ₹ 165

ಇನ್ನು ಶೇಂಗಾ ಎಣ್ಣೆಯ 5 ಕಿಲೋ ಡಬ್ಬಿಯ ಬೆಲೆ 1000 ರೂ.ನಿಂದ 1150 ರೂ.ಗೆ ಏರಿದ್ದರೆ, 15 ಕಿಲೋದ ಹೋಲ್‌ಸೇಲ್ ಟಿನ್ ಬೆಲೆ 2400 ರೂ. ತಲುಪಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST