LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಮಗು ತುಂಟಾಟ ಮಾಡಿದಕ್ಕೆ ಕಬ್ಬಿಣದ ರಾಡ್​ನಿಂದ ಬರೆ ಎಳೆದ ತಾಯಿ 

Advertisement
ಹುಬ್ಬಳ್ಳಿ: ಮಗು ತುಂಟಾಟ ಮಾಡೋದು ಕಾಮನ್. ಆದರೆ, ಇಲ್ಲೊಬ್ಬ ತಾಯಿ ತಾನೇ ಹೆತ್ತ ಮಗನಿಗೆ ಕಬ್ಬಿಣದ ರಾಡ್​ನಿಂದ ಕೈ, ಕಾಲು ಮತ್ತು ಕುತ್ತಿಗೆ ಮೇಲೆ ಬರೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಗುವಿಗೆ ಬರೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.ತಾಯಿ ಅನುಷಾ ಹುಲಿಮಾರ ತನ್ನ ಮಗುವಿನ ಕೀಟಲೆಯಿಂದ ಕೋಪಗೊಂಡು ಕ್ರೂರ ಶಿಕ್ಷೆ ನೀಡಿದ್ದಾಳೆ. ತನ್ನ ಮಗುವಿನ ಕೈಕಾಲುಗಳು ಮತ್ತು ಕುತ್ತಿಗೆಗೆ ಕಬ್ಬಿಣದ ಬಿಸಿ ರಾಡ್‌ನಿಂದ ತೀವ್ರ ಸುಟ್ಟ ಗಾಯ ಮಾಡಿದ್ದಾಳೆ.

ಮಗುವಿನ ಕೂಗು ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಬಾಲಕನನ್ನು ರಕ್ಷಿಸಿದ್ದಾರೆ. ಅಮಾನವೀಯ ಕೃತ್ಯದಿಂದ ಆಘಾತಕ್ಕೊಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಹಳೆ ಪಟ್ಟಣ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂತ್ರಸ್ತ ಮಗುವಿಗೆ ಅಗತ್ಯ ಬೆಂಬಲ ಮತ್ತು ಆರೈಕೆ ನೀಡಲು ಮುಂದಾಗಿದ್ದಾರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST