LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಶಿವಾನಂದ ನೀಲಣ್ಣವರಗೆ ಸೇರಿದ್ದ ನಾಲ್ಕು ಐಷಾರಾಮಿ ಕಾರುಗಳು ಸೀಜ್

Advertisement

ಬೆಳಗಾವಿ: ಹೂಡಿಕೆ ಮೂಲಕ ಬರೋಬ್ಬರಿ 4500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬೆಳಗಾವಿಯ ಶಿವಂ ಅಸೋಸಿಟೇಟ್ ಮಾಲೀಕ ಶಿವಾನಂದ ನೀಲಣ್ಣವರ್ ಸಂಕಷ್ಟ ಹೆಚ್ಚಾಗಿದೆ.

ತನಿಖೆ ತೀವ್ರಗೊಳಿಸಿರುವ ಪೊಲೀಸರು ಇದೀಗ ಶಿವಾನಂದನ ನೀಲಣ್ಣನವರ್ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಮತ್ತೊಂದೆಡೆ ಸಿಐಡಿ ಕಸ್ಟಡಿಯಲ್ಲಿ ಶಿವಾನಂದ ನೀಲಣ್ಣನವರ್ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಜೊತೆಗೆ ಶಿವಾನಂದ ನೀಲಣ್ಣನವರ್ ಜೊತೆಗೆ ವ್ಯವಹರಿಸಿದ್ದ ಕೆಲವರಿಗೂ ನೋಟಿಸ್ ನೀಡಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿರುವ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ನಾಲ್ಕು ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದೆ. ಲ್ಯಾಂಡ್ ರೂವರ್ ಡಿಫೆಂಡರ್, ಟೊಯೋಟಾ ವೆಲ್ಫೈ, ಮರ್ಸಿಡಿಸ್ ಎಎಂಜಿ ಕಾರುಗಳನ್ನು ಸೀಜ್ ಮಾಡಲಾಗಿದೆ.

ಶಿವಾನಂದ ನೀಲಣ್ಣನವರ್ ಐಷಾರಾಮಿ ಕಾರುಗಳ ಜೊತೆಗೆ ಪತ್ನಿ ಬಳಸುತ್ತಿದ್ದ ಹ್ಯುಂಡೈ ವರ್ನಾ ಕಾರು ಸೀಜ್ ಮಾಡಲಾಗಿದೆ.

ಮಹಜರು ಹಾಗೂ ತನಿಖೆ ಕಾರಣದಿಂದ ಸಿಐಡಿ ಪೊಲೀಸರು ಶಿವಾನಂದ ನೀಲಣ್ಣನವರ್ ಅವರನ್ನು ಶಿವಬಸವ ನಗರದ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ.

ಇದೇ ವೇಳೆ ಪೊಲೀಸರು ಶಿವಾನಂದ ನೀಲಣ್ಣನವರ್ ಜೊತೆ ಸಂಪರ್ಕದಲ್ಲಿದ್ದ ಜೊತೆಗೆ ಕೆಲ ವ್ಯವಹಾರದಲ್ಲಿ ಕೈಜೋಡಿಸಿದವರಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ನೀಡಿದ್ದ ಕಾರನ್ನು ಪೊಲೀಸರು ಸೀಜ್ ಮಾಡಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST