LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಮದುವೆಯ ಮೊದಲ ದಿನ ರಾತ್ರಿಯೇ ವಧು ಆತ್ಮಹತ್ಯೆ

Advertisement
ಹೈದರಾಬಾದ್: ಮದುವೆಯ ಮೊದಲದಿನ ರಾತ್ರಿಯೇ ವಧು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ.

ಇಲ್ಲಿನ ಸೋಮಂಡೆಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಹರ್ಷಿತಾ (22) ಆತ್ಮಹತ್ಯೆಗೆ ಶರಣಾದ ವಧು. ಅದ್ದೂರಿ ವಿವಾಹ ಸಮಾರಂಭ ನಡೆದ ಕೆಲವೇ ಗಂಟೆಗಳಲ್ಲಿ ವಧು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹರ್ಷಿತಾ ಕರ್ನಾಟಕ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿದ್ದರು. ದಂಪತಿ ಪೆನುಕೊಂಡದ ವಧುವಿನ ಮನೆಯಲ್ಲಿದ್ದರು. ಮೊದಲ ರಾತ್ರಿಗೆ ಸಿದ್ಧತೆ ನಡೆದಿತ್ತು.

ವರ ನಾಗೇಂದ್ರ ಸಿಹಿತಿಂಡಿ ತರಲೆಂದು ಹೊರಗೆ ಹೋಗಿದ್ದರು. ಅವರು ಮನೆಗೆ ಹಿಂದಿರುಗುವಷ್ಟರಲ್ಲಿ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಬಡಿದರೂ ವಧು ಬಾಗಿಲು ತೆರೆದಿಲ್ಲ. ಕುಟುಂಬ ಸದಸ್ಯರು ರೂಮಿನ ಬಾಗಿಲು ಒಡೆದು ನೋಡಿದಾಗ ಹರ್ಷಿತಾ ಆತಮಹತ್ಯೆಗೆ ಶರಣಾಗಿದ್ದರು.

ತಕ್ಷಣ ಆಕೆಯನ್ನು ಪೆನುಕೊಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹರ್ಷಿತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದುವೆ ದಿನವೇ ವಧು ಆತ್ಮಹತ್ಯೆ ಎರಡೂ ಕುಟುಂಬಕ್ಕೂ ಆಘಾತ ತಂದಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST