LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶದ ಬೆಂಕಿ!

Advertisement

ಪಾವಗಡದಲ್ಲಿ ಸರ್ಕಾರಿ ನಿಯಮಕ್ಕೆ ಎಳ್ಳುನೀರು

ಅಧಿಕಾರಿಗಳೇ ಎಚ್ಚರ! ನಿಗದಿತ ಸಮಯ ಮೀರಿದರೂ ಶುರುವಾಗದ 'ಪ್ರಜಾಸೇವೆ ಅಭಿಯಾನ': ಅರ್ಜಿ ಹಿಡಿದು ಕಾದ ಕಾದ ಜನರು ಮನೆಗೆ ವಾಪಸ್!

​ಪಾವಗಡ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಾಗಲಮಡಿಕೆ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ.

 'ಪ್ರಜಾಸೇವೆ ಅಭಿಯಾನ' ಸಭೆಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 

 

ಸರ್ಕಾರಿ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆ, ಸಮಯ 11:50 ದಾಟಿದರೂ ಇನ್ನು ಆರಂಭಗೊಳ್ಳದೆ

 ಅಧಿಕಾರಿಗಳ ಸೈಲೆಂಟ್ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

​ಜನರ ಗೋಳು: ತಮ್ಮ ಕುಂದುಕೊರತೆಗಳ ಅರ್ಜಿ ಹಿಡಿದು ದೂರದ ಊರುಗಳಿಂದ ಆಸೆಯಿಂದ ಬಂದಿದ್ದ ಸಾರ್ವಜನಿಕರು ಹಾಗೂ ರೈತರು, ಘಂಟೆಗಟ್ಟಲೆ ಕಾಯ್ದು ಕಾಯ್ದು ಬೇಸತ್ತು ಮನೆ ಕಡೆಗೆ ಕಾಲ್ನಡಿಗೆ ಬೆಳೆಸುವ ದುಸ್ಥಿತಿ ನಿರ್ಮಾಣವಾಗಿದೆ.

​ಸಮಯ ಪಾಲನೆ ಎಲ್ಲಿ:
 ಸಾರ್ವಜನಿಕರ ಸೇವೆಯೇ ಪರಮೋಚ್ಚ ಧರ್ಮ ಎಂದು ಭಾಷಣ ಬಿಗಿಯುವ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಯದ ಪ್ರಜ್ಞೆಯೂ ಇಲ್ಲವೇ.

 ನಿಯಮ ರೂಪಿಸುವ ಸರ್ಕಾರಿ ಅಧಿಕಾರಿಗಳೇ ಈ ರೀತಿ ಉಡಾಫೆ ತೋರಿದರೆ ಬಡಜನರ ಸಂಕಷ್ಟ ಕೇಳುವವರು ಯಾರು.
​ತಕ್ಷಣದ ಎಚ್ಚರಿಕೆ:

 ಈ ಕೂಡಲೇ ಸಂಬಂಧಪಟ್ಟ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾಡಳಿತ ನಿದ್ರೆಯಿಂದ ಎದ್ದು, ನಾಗಲಮಡಿಕೆ ಹೋಬಳಿಯ ಸಭೆಗೆ ಗೈರಾದ ಮತ್ತು ವಿಳಂಬ ಧೋರಣೆ ತೋರಿದ ಅಧಿಕಾರಿಗಳ ವಿರುದ್ಧ ಖಡಕ್ ಶಿಸ್ತುಕ್ರಮ ಜರುಗಿಸಬೇಕು.

 ಇಲ್ಲವಾದಲ್ಲಿ ಸಾರ್ವಜನಿಕರ ಈ ಆಕ್ರೋಶದ ಬೆಂಕಿ ಮುಂದೆ ದೊಡ್ಡ ಮಟ್ಟದ ಹೋರಾಟವಾಗಿ ಸಿಡಿಯುವುದು ಖಚಿತ!

ವರದಿ : ಶಿವಾನಂದ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್