LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಫ್ರಿಡ್ಜ್ ನಲ್ಲಿ ಪ್ರತ್ಯಕ್ಷವಾಯಿತ್ತು ಶಿವಲಿಂಗ : ನೋಡಲು ಮುಗಿಬಿದ್ದ ಜನ

Advertisement

ಆಗ್ರಾ: ಭೀಮ್‌ನಗರದ ಮನೆಯೊಂದರ ರೆಫ್ರಿಜರೇಟರ್ (refrigerator) ಒಳಗೆ ಮಂಜಿನಿಂದ ಶಿವಲಿಂಗದಂತಹ (shivling) ಆಕೃತಿಯೊಂದು ನೈಸರ್ಗಿಕವಾಗಿ ಸೃಷ್ಟಿಯಾಗಿದ್ದು, ಜನರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಅಪರೂಪದ ದೃಶ್ಯವನ್ನು ನೋಡಲು ಮತ್ತು ಪೂಜೆ ಸಲ್ಲಿಸಲು ಮುಗಿಬೀಳುತ್ತಿದ್ದಾರೆ.

ಮನೆಯ ಫ್ರಿಡ್ಜ್ ಫ್ರೀಜರ್‌ನಲ್ಲಿ ನೈಸರ್ಗಿಕವಾಗಿ ಉಂಟಾದ ಹಿಮದ ರಚನೆಯು ಶಿವಲಿಂಗದಂತೆ ಕಾಣುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ನೆರೆಹೊರೆಯವರಿಗೆ ತಿಳಿಸಿದ್ದಾರೆ. ನೂರಾರು ಜನರು ಮನೆಯತ್ತ ಧಾವಿಸಿ ಮಂಜುಗಡ್ಡೆಯ ಶಿವಲಿಂಗದ ದರ್ಶನ ಪಡೆದಿದ್ದಾರೆ.

ಮಂಜುಗಡ್ಡೆಯ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಹರ ಹರ ಮಹಾದೇವ್ ಎಂದು ಜಯಘೋಷ ಮೊಳಗಿಸುತ್ತಾ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಇದರಿಂದಾಗಿ ಸಾಮಾನ್ಯ ಮನೆಯೊಂದು ಸದ್ಯ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

ತಮ್ಮ ಮನೆಯ ಫ್ರಿಡ್ಜ್‌ನಲ್ಲಿ ಮೂಡಿರುವ ಐಸ್ ಆಕೃತಿಯನ್ನು ನೋಡಿ ಲತಾ ಕುಶ್ವಾಹಾ ಅವರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಅಮರನಾಥಕ್ಕೆ ಹೋಗಬೇಕೆಂದು ನಾನು ನನ್ನ ಪತಿಯೊಂದಿಗೆ ಹಲವು ಬಾರಿ ಜಗಳ ಆಡಿದ್ದೆ. 

ಆದರೆ ನನ್ನ ಆಸೆಯನ್ನು ಈಡೇರಿಸಲು ಸಾಕ್ಷಾತ್ ಭೋಲೇನಾಥನೇ ನನ್ನ ಮನೆಗೆ ಬಂದಿದ್ದಾನೆ. ಭಗವಾನ್ ಶಿವನು ನನಗೆ ದರ್ಶನ ನೀಡಿದ್ದಾನೆ. ಇದು ನಿಜಕ್ಕೂ ಪವಾಡ. ನನ್ನ ಕಣ್ಣುಗಳನ್ನು ನಾನೇ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST