LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಎರಡು ವರ್ಷಗಳ ಬಳಿಕ ಭಾರತದಲ್ಲೇ ಸಾರ್ವಜನಿಕವಾಗಿ ಮಾತನಾಡಿಲಿರುವ ಶೇಖ್ ಹಸೀನಾ

Advertisement

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರ ತೊರೆದ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. 

ಹೊಸದಿಲ್ಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ (ಎಫ್‌ಸಿಸಿ) ಸೌತ್ ಏಷ್ಯಾ ಆಯೋಜಿಸಿರುವ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದು, ತಮ್ಮ ಭವಿಷ್ಯದ ರಾಜಕೀಯ ಯೋಜನೆಗಳು ಮತ್ತು ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆಯ ಕುರಿತು ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

2024 ರಲ್ಲಿ ನಡೆದ ವ್ಯಾಪಕ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರ ಸರ್ಕಾರ ಪತನಗೊಂಡ ಬಳಿಕ ಹಸೀನಾ ಮಾಡುತ್ತಿರುವ ಮೊದಲ ಪ್ರಮುಖ ಸಾರ್ವಜನಿಕ ಸಂವಾದ ಇದಾಗಿದೆ.

​ಆಗಸ್ಟ್ 5, 2026 ರಂದು ಸಂಜೆ 6 ರಿಂದ 7:30 ರವರೆಗೆ ಹೊಸದಿಲ್ಲಿಯ ಸರ್ ಮಾರ್ಕ್ ಟುಲ್ಲಿ ಸಭಾಂಗಣದಲ್ಲಿ ಈ ವರ್ಚುವಲ್ ಸಂವಾದವು ನಿಗದಿಯಾಗಿದ್ದು, ಎಫ್‌ಸಿಸಿ ಸೌತ್ ಏಷ್ಯಾದ ಸಾಮಾಜಿಕ ಜಾಲತಾಣಗಳಲ್ಲಿಯೂ ನೇರಪ್ರಸಾರವಾಗಲಿದೆ. ದೇಶ ಬಿಟ್ಟು ಭಾರತಕ್ಕೆ ಬಂದ ನಂತರ ಹಸೀನಾ ಅವರು ಹೆಚ್ಚಾಗಿ ಸಾರ್ವಜನಿಕ ಕಣ್ಣಿಗೆ ಕಾಣಿಸಿಕೊಳ್ಳದೆ ಮೌನ ವಹಿಸಿದ್ದರು. 

2024 ರ ಆಗಸ್ಟ್ 5 ರಂದು ಉದ್ಯೋಗ ಮೀಸಲಾತಿ ವ್ಯವಸ್ಥೆ ವಿರೋಧಿಸಿ ನಡೆದ ತೀವ್ರ ಪ್ರತಿಭಟನೆಗಳು ದೇಶಾದ್ಯಂತ ಸರ್ಕಾರಿ ವಿರೋಧಿ ಆಂದೋಲನವಾಗಿ ರೂಪುಗೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಅವರು ತಮ್ಮ 16 ವರ್ಷಗಳ ಆಡಳಿತಕ್ಕೆ ವಿದಾಯ ಹೇಳಿ ಭಾರತಕ್ಕೆ ಬಂದಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST