LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮತ್ತೇ ಫೈನಲ್ ತಲುಪುವರೇ ಆರ್‌ಸಿಬಿ- ಪಂಜಾಬ್ ಕಿಂಗ್ಸ್?

Advertisement


ಸುಧೀರ್ಘ ೨ ತಿಂಗಳು, ಒಂದು ವಾರದ ಐಪಿಎಲ್ ೧೯ ನೇ ಎಡಿಷನ್‌ನ ಕ್ರಿಕೆಟ್ ಹಬ್ಬ ಶುರುವಾಗಿ ಇದೀಗ ಅರ್ಧದಷ್ಟು ಪಂದ್ಯಗಳು ಮುಗಿಯುತ್ತ ಬಂದಿವೆ.
ಚುಟುಕು ಕ್ರಿಕೆಟ್ ಹಬ್ಬದ ಈ ವರೆಗಿನ ಪಂದ್ಯಾವಳಿಯ ವಿಶ್ಲೇಷಣೆ ಮಾಡುವ ಹೊತ್ತಿಗೆ ಹೈದರಾಬಾದ್‌ನಲ್ಲಿ ೩೧ ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುವುದಿತ್ತು.
ಮೇ ೩೧ ರವರೆಗೆ ಪಂದ್ಯಾವಳಿ ನಡೆಯುವುದಿದ್ದು, ಮೇ. ೨೪ ರವಿವಾರ ಲೀಗ್‌ನ ಕಡೆಯ ಪಂದ್ಯಗಳು ನಡೆಯಲಿವೆ. ೨೫ ರಿಂದ ೩೧ ರವರೆಗೆ ಪ್ಲೇ- ಆಪ್ ಹಾಗೂ ಫೈನಲ್ ಪಂದ್ಯ ನಡೆದು ಪಂದ್ಯಾವಳಿ ತೆರೆ ಕಾಣಲಿದೆ.
ಈ ನಡುವೆ ಪಂದ್ಯಾವಳಿಯ ಅರ್ಧದಷ್ಟು ಹಾದಿ ಸಾಗಿದ್ದು, ಈ ಹಂತದಲ್ಲಿ ತಂಡಗಳ ಬಲಾಬಲ ಹಾಗೂ ತಂಡಗಳ ಸಾಮರ್ಥ್ಯ ಹಾಗೂ ಪ್ರಶಸ್ತಿಗೆ ಸಮೀಪಿಸುವ ಅಥವಾ ಗೆಲ್ಲುವ ತಂಡಗಳ ಅಂದಾಜು ವಾಸನೆ ಕ್ರಿಕೆಟ್ ಪ್ರೀಯರಿಗೆ ಈಗಾಗಲೇ ಬಡಿಯ ತೊಡಗಿದೆ.
ಸಹಜವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೇಲಿರುವ ತಂಡಗಳತ್ತ ಗಮನ ಇರುವುದು ಸಹಜ. ಇದರಲ್ಲಿ ಪ್ರಮುಖವಾಗಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಪ್ರಶಸ್ತಿ ಪಡೆಯುವ ನೆಚ್ಚಿನ ತಂಡಗಳೆAದು ಅನಿಸತೊಡಗಿದೆ.
ಕಳೆದ ಬಾರಿ ಫೈನಲ್ ಆಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಎಲ್ಲರ ಕಣ್ಣು ಇರುವುದು ಸಹಜ. ಈ ಬಾರಿಯೂ ಎರಡೂ ತಂಡಗಳು ತಮ್ಮ ಖ್ಯಾತಿಗೆ ತಕ್ಕುದಾಗಿ ಆಡುತ್ತಿವೆ.
ಪಂಜಾಬ್ ಕಿಂಗ್ಸ್ ಅಂತೂ ತಾನಾಡಿರುವ ಎಲ್ಲ ೬ ಪಂದ್ಯಗಳಲ್ಲಿ ಒಂದರಲ್ಲಿಯೂ ಸೋಲು ಕಾಣದೇ ಈವರೆಗೆ ಸೋಲಿಲ್ಲದ ಸರದಾರನಾಗಿದೆ.
ಆರ್‌ಸಿಬಿ ೬ ಪಂದ್ಯಗಳಲ್ಲಿ ೨ ರಲ್ಲಿ ಸೋತಿದೆಯಾದರೂ ಆಟದ ಗುಣಮಟ್ಟ ತುಂಬಾ ದೊಡ್ಡದಿದೆ.
ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಪ್ರಬಲ ಬ್ಯಾಟಿಂಗ್ ಪಡೆ ಹೊಂದಿವೆ. ಎರಡೂ ತಂಡಗಳ ಆಟದ ಗುಣಮಟ್ಟ ಒಂದು ಇನ್ನೊಂದು ತಂಡವನ್ನು ಮೀರಿಸುವಂತಿವೆ. ಒಂದು ಪಂದ್ಯದಲ್ಲಿ ಆರ್‌ಸಿಬಿ ಆಟದ ಗುಣಮಟ್ಟ ಉನ್ನತ ಮಟ್ಟದಲ್ಲಿದೆ ಎನಿಸಿದರೆ ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ನ ಸಾಮರ್ಥ್ಯ ಎಲ್ಲ ತಂಡಗಳನ್ನು ಮೀರಿಸುವಂತಿದೆ ಎಂದು ಅನಿಸುತ್ತಿದೆ. ಸದ್ಯದ ಮಟ್ಟಿಗೆ ಲೆಕ್ಕ ಹಾಕುವುದಾದರೆ ಈ ಬಾರಿಯೂ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳೇ ಫೈನಲ್ ತಲುಪಲಿವೆ ಎಂದು ಅನಿಸತೊಡಗಿದೆ.
ಇನ್ನು ರಾಜಸ್ತಾನ್ ರಾಯಲ್ಸ್ ಕೂಡ ಅಂಕ ಪಟ್ಟಿಯಲ್ಲಿ ಮೇಲೆಯೇ ಇರುವುದು ಅಷ್ಟೇ ಅಲ್ಲ. ಉತ್ತಮ ಬ್ಯಾಲೆನ್ಸ್ ತಂಡ ಕೂಡ ಆಗಿದೆ. ಈ ತಂಡದ ಬೌಲಿಂಗ್ ಚೆನ್ನಾಗಿದೆ. ಆದರೆ ಬ್ಯಾಟಿಂಗ್ ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ತುಂಬಾ ನೆಚ್ಚಿಕೊಂಡಿದೆ. ಇವರಿಬ್ಬರ ಪ್ರದರ್ಶನದ ಮೇಲೆಯೇ ತಂಡದ ಭವಿಷ್ಯ ಅಡಗಿದೆ.
ದೆಹಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಬಾರಿ ತನ್ನ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದೆ. ತಂಡಕ್ಕೆ ಸಮೀರ್ ರಿಜ್ವಿಯಂತಹ ಯುವ ಬ್ಯಾಟರ್‌ಗಳು ಭರವಸೆ ಮೂಡಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡ ಹಗುರವಾಗಿ ತಿಳಿದುಕೊಳ್ಳುವಂತಿಲ್ಲ. ಇಲ್ಲಿಯೂ ಕೂಡ ತಂಡ ಅಭಿಷೇಕ್ ಶರ್ಮಾ ಹಾಗೂ ಟ್ರೆವಿಸ್ ಹೆಡ್ ಅವರನ್ನು ತುಂಬಾ ಅವಲಂಭಿಸಿದೆ.
ಏತನ್ಮಧ್ಯೆ ತಂಡದ ಮೊತ್ತವನ್ನು ೨೫೦ ಕ್ಕೂ ಹಿಗ್ಗಿಸುವ ಸಾಮರ್ಥ್ಯ ಇರುವ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಸಹಜವಾಗಿಯೇ ಈಗಿನ ಪ್ರಶಸ್ತಿ ಫೆವರಿಟ್ ತಂಡಗಳಾಗಿ ಕಾಣುತ್ತಿವೆ.
ಇನ್ನು ಚಾಂಪಿಯನ್ ತಂಡಗಳಾದ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಸೇರಿ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಕೆಳಗಿರುವ ತಂಡಗಳು ಅಂದರೆ ಯಾವ ತಂಡವೂ ಪಂದ್ಯಾವಳಿಯಿAದ ಹೊರ ಬಿದ್ದಿಲ್ಲ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST