LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಸಾಕು ನಾಯಿ ಡೆಡ್ಲಿ ಅಟ್ಯಾಕ್ : ಮಹಿಳೆಗೆ ಬಿತ್ತು 50ಕ್ಕೂ ಹೆಚ್ಚು ಹೂಲಿಗೆ, ಎಫ್‌ಐಆರ್ ದಾಖಲು

Advertisement
ಬೆಂಗಳೂರು : ಇತ್ತೀಚಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದೀಗ, ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಭೀಕರವಾಗಿ ಸಾಕು ನಾಯಿಯೊಂದು ದಾಳಿ ಮಾಡಿದ್ದು ಮಹಿಳೆಯ ಮುಖ ತಲೆ ಕುತ್ತಿಗೆ ಸೇರಿ 50ಕ್ಕೂ ಸ್ಟಿಚ್ ಹಾಕಲಾಗಿದೆ.

ಜನವರಿ 26ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಲ್ಲಿ ಈ ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ರಸ್ತೆ ಬದಿಯಲ್ಲಿ ಏಕಾಏಕಿ ದಾಳಿ ಮಾಡಿದೆ.

ಈ ವೇಳೆ ಅಲ್ಲಿಯದ ಒಬ್ಬ ವ್ಯಕ್ತಿ ಸಹಾಯ ಸಹಾಯಕ್ಕೆ ಬರುತ್ತಾರೆ. ಆದರೂ ಕೂಡ ನಾಯಿ ಅಟ್ಯಾಕ್ ಮಾಡೋದನ್ನ ನಿಲ್ಲಿಸಲ್ಲ.

ಅಮರೇಶ್ ರೆಡ್ಡಿ ಎನ್ನುವವರಿಗೆ ಸೇರಿದ ಸಾಕೋ ನಾಯಿ ಅಟ್ಯಾಕ್ ಮಾಡಿದ್ದು ಬಿಡಿಸಲು ಬಂದ ವ್ಯಕ್ತಿಯ ಮೇಲು ಕೂಡ ದಾಳಿ ಮಾಡಿದೆ.

ಸದ್ಯ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುತ್ತಿಗೆ ತಲೆ ಹಾಗೂ ಮುಖಕ್ಕೆ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ನಾಯಿಯ ಮಾಲೀಕರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST