LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಚ್ ಎಂಟಿ ವಾಚ್ ಗಳಿಗಾಗಿ 2 ಕಿಲೋಮೀಟರ್ ಸಾಲುಗಟ್ಟಿ ನಿಂತ ಜನ : ವಿಡಿಯೋ ವೈರಲ್ 

Advertisement

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence day) ಅಂಗವಾಗಿ ಹೆಚ್‌ಎಂಟಿ (HMT) ಬಿಡುಗಡೆ ಮಾಡಿದ ವಿಶೇಷ ಸರಣಿಯ ಕೈಗಡಿಯಾರಗಳನ್ನು (Watches) ಖರೀದಿಸಲು ಸಾರ್ವಜನಿಕರು ಜಾಲಹಳ್ಳಿಯ ಕಾರ್ಖಾನೆ ಮಳಿಗೆ ಬಳಿ ಸುಮಾರು ಎರಡೂವರೆ ಕಿಲೋಮೀಟರ್‌ವರೆಗೆ ಸರತಿ ನಿಂತರು.

ಬಿಸಿಲನ್ನೂ ಲೆಕ್ಕಿಸದೆ ವಿವಿಧ ವಯೋಮಾನದ ಗ್ರಾಹಕರು ವಾಚ್‌ಗಳಿಗಾಗಿ ಕಾಯುತ್ತಿರುವುದು ಹೆಚ್‌ಎಂಟಿ ಮೇಲಿನ ಜನರ ಅಭಿಮಾನಕ್ಕೆ ಸಾಕ್ಷಿಯಾಯಿತು.

ಈ ವಿಶೇಷ ಸರಣಿಯ ವಾಚ್ ನಲ್ಲಿ ತ್ರಿವರ್ಣ ಧ್ವಜ ಮತ್ತು ಗಂಡಭೇರುಂಡ ವಿನ್ಯಾಸದ ವಿಶೇಷ ಡಿಸೈನ್ ಗಳು ಒಂದೇ ದಿನದಲ್ಲಿ ಸಂಪೂರ್ಣ ಮಾರಾಟವಾಗಿವೆ. ಜಾಲಹಳ್ಳಿ ಹಾಗೂ ಮೇಕ್ರಿ ಸರ್ಕಲ್ ಬಳಿಯ ಹೆಚ್‌ಎಂಟಿ ಭವನದ ಮಳಿಗೆಯಲ್ಲಿದ್ದ ಗಡಿಯಾರಗಳೂ ಖಾಲಿಯಾಗಿವೆ.

ಹೀಗೆ ಜನರ ಉತ್ಸಾಹ ಕಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದು, ಹೆಚ್‌ಎಂಟಿಗೆ ಮರುಜೀವ ನೀಡುವ ಪ್ರಯತ್ನಕ್ಕೆ ಇದು ಉತ್ತೇಜನ ನೀಡಿದೆ ಎಂದಿದ್ದಾರೆ. 

ಸಂಸ್ಥೆಯ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ರಮೇಶ್ ಪ್ರಕಾರ, ಮುಂದಿನ ತಿಂಗಳ ಅಂತ್ಯದೊಳಗೆ ಹೊಸ ಸರಣಿಯ ವಾಚ್‌ಗಳನ್ನು ತರಲಾಗುವುದು. ಅತ್ಯುತ್ತಮ ಆಟೋಮ್ಯಾಟಿಕ್ ಮಾದರಿಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಇದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್