LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

4.1 ಕೋಟಿ ಮಕ್ಕಳಲ್ಲಿ ಬೋಜು : ಜಗತ್ತಿನಲ್ಲೇ ಭಾರತಕ್ಕೆ 2ನೇ ಸ್ಥಾನ

Advertisement

ನವದೆಹಲಿ: ಭಾರತದ ಮಕ್ಕಳಲ್ಲಿ ಬೊಜ್ಜು ಹಾಗೂ ಅತಿಯಾದ ತೂಕದ ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ದೇಶವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಎಂದು 'ವರ್ಲ್ಡ್ ಒಬೆಸಿಟಿ ಅಟ್ಲಾಸ್' ವರದಿ ಹೇಳಿದೆ.

ಪ್ರಸ್ತುತ ದೇಶದಲ್ಲಿ 5-19 ವರ್ಷದೊಳಗಿನ ಸುಮಾರು 4.1 ಕೋಟಿ ಮಕ್ಕಳು ಅತಿಕಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಈ ಪೈಕಿ 1.4 ಕೋಟಿ ಮಕ್ಕಳು ತೀವ್ರ ಬೊಜ್ಜಿನ ವ್ಯಾಪ್ತಿಗೆ ಬರುತ್ತಾರೆ ಎಂದು ವರದಿ ಹೇಳಿದೆ.

ಈ ಪಟ್ಟಿಯಲ್ಲಿ 6.2 ಕೋಟಿ ಮಕ್ಕಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದ್ದರೆ, 2.7 ಕೋಟಿ ಮಕ್ಕಳೊಂದಿಗೆ ಅಮೆರಿಕ ಮೂರನೇ ಸ್ಥಾನದಲ್ಲಿದೆ.

ತಕ್ಷಣವೇ ಸೂಕ್ತ ಆರೋಗ್ಯ ನೀತಿ ಹಾಗೂ ಜಾಗೃತಿ ಕ್ರಮಗಳನ್ನು ಕೈಗೊಳ್ಳದಿದ್ದರೆ, 2040ರ ವೇಳೆಗೆ ಭಾರತದಲ್ಲಿ ಅತಿಯಾದ ತೂಕ ಹೊಂದಿರುವ ಮಕ್ಕಳ ಸಂಖ್ಯೆ 5.6 ಕೋಟಿಗೆ ತಲುಪುವ ಅಪಾಯವಿದೆ ಎಂದು ವರದಿ ಎಚ್ಚರಿಸಿದೆ. 

ಹದಿಹರೆಯದ ಶೇ.74ರಷ್ಟು ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆ ಭರಿತ ಪಾನೀಯಗಳ ಬಳಕೆ ಹಾಗೂ ಬಾಲ್ಯದಲ್ಲಿ ಸಮರ್ಪಕ ಪೋಷಕಾಂಶಗಳ ಅಭಾವವೇ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಜತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ರೂಢಿಸಿಕೊಳ್ಳುತ್ತಿರುವ ದಿನಚರಿ ಹಾಗೂ ಅದನ್ನು ಬದಲಿಸಿಕೊಳ್ಳುವಂತೆ ಅವರಿಗೆ ಯಾರಿಂದಲೂ ಮಾರ್ಗದರ್ಶನ ಸಿಗದಿರುವುದು ಕೂಡ ಅತಿ ತೂಕದ ಸಮಸ್ಯೆ ಜಾಗತಿಕವಾಗಿ ಹೆಚ್ಚಾಗಲು ಕಾರಣ ಎನ್ನಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST