LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

7,000 ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಪಾಸಿಟಿವ್ ಸುದ್ದಿ ತಪ್ಪು ಹಾಗೂ ಆಧಾರರಹಿತ : ಆರೋಗ್ಯ ಇಲಾಖೆ 

Advertisement

ಬೆಂಗಳೂರು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಲ್ಲಿ 7,000 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ ಹಾಗೂ ಕಾಲೇಜುಗಳಲ್ಲಿ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳು ಸಂಪೂರ್ಣ ತಪ್ಪು ಹಾಗೂ ಆಧಾರರಹಿತ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (KSAPS) ಸ್ಪಷ್ಟನೆ ನೀಡಿದೆ. 

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆಎಸ್‌ಎಪಿಎಸ್ ಯೋಜನಾ ನಿರ್ದೇಶಕರು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ನೈಜ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'7,000 ವಿದ್ಯಾರ್ಥಿಗಳಿಗೆ ಸೋಂಕು' ಸುದ್ದಿ ಸುಳ್ಳು: ನೈಜ ಅಂಕಿ-ಅಂಶ ಇಲ್ಲಿದೆ

ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವಂತೆ 7,000 ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕು ಹರಡಿದೆ ಎಂಬುದು ತಪ್ಪು ಅರ್ಥೈಸುವಿಕೆಯಾಗಿದೆ.

ವಾಸ್ತವವಾಗಿ, ಕಾರ್ಯಕ್ರಮ ಪ್ರಾರಂಭವಾದ 2004 ರಿಂದ ಇಲ್ಲಿಯವರೆಗೂ (ಸುಮಾರು 22 ವರ್ಷಗಳಲ್ಲಿ) 18 ರಿಂದ 35 ವಯೋಮಾನದ ಒಟ್ಟು 39,028 ಎಚ್.ಐ.ವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ತಪ್ಪಾಗಿ ಗ್ರಹಿಸಿ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.

ಎಚ್‌ಐವಿ ಪರೀಕ್ಷೆ ಕಡ್ಡಾಯವಲ್ಲ

ಎಚ್‌ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ, 2017 ರ ನಿಯಮಾವಳಿಗಳ ಪ್ರಕಾರ ಯಾವುದೇ ವ್ಯಕ್ತಿಗೆ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಕಾಲೇಜುಗಳಲ್ಲಾಗಲಿ ಅಥವಾ ಇತರ ಎಲ್ಲೇ ಆಗಲಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿಲ್ಲ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST