LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಫಸಲನ್ನು ಕದ್ದವರು ನಾಶವಾಗಲಿ : ಅಪರೂಪದ ಶಾಪಾಶಯ ಶಾಸನ ಪತ್ತೆ

Advertisement

ಬಳ್ಳಾರಿ : ಬಳ್ಳಾರಿ (Ballari) ಜಿಲ್ಲೆಯ ಐತಿಹಾಸಿಕ ತಾಣ ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಗೆ ಸೇರಿದ ಡಿ.ಅಂತಾಪುರ ಗ್ರಾಮದಲ್ಲಿ ಅತ್ಯಂತ ಅಪರೂಪದ ಕಲ್ಲಿನ ಶಾಸನ (Inscription)ವೊಂದು ಬೆಳಕಿಗೆ ಬಂದಿದೆ.

ಗ್ರಾಮದ ರೈತ ತಾಯಪ್ಪ ಅವರ ಜಮೀನಿನ ಬದುವಿನಲ್ಲಿ ಹಲವು ಕಾಲದಿಂದ ಅನಾಥವಾಗಿ ಬಿದ್ದಿದ್ದ ಈ ಶಿಲೆಯು ಇತಿಹಾಸ ಸಂಶೋಧಕರ ಗಮನ ಸೆಳೆದಿದ್ದು, ಕೃಷಿ ಸಂಸ್ಕೃತಿ ಮತ್ತು ಪ್ರಾಚೀನ ನಂಬಿಕೆಗಳ ಮೇಲೊಂದು ಹೊಸ ಬೆಳಕು ಚೆಲ್ಲಿದೆ.

ವಿಜಯನಗರ ಸಾಮ್ರಾಜ್ಯದ ಪತನಾನಂತರದ ಕಾಲಘಟ್ಟಕ್ಕೆ ಸೇರಿದ ಈ ಶಾಸನವು ಆ ಕಾಲದ ಜನಜೀವನದ ವಿಶಿಷ್ಟ ಆಯಾಮವನ್ನು ತೆರೆದಿಡುತ್ತದೆ.

ಶಾಸನದ ಹಿನ್ನೆಲೆ ಮತ್ತು ಕಾಲಘಟ್ಟ

ವಿಜಯನಗರ ಸಾಮ್ರಾಜ್ಯದ ವೈಭವ ಕಮರಿದ ನಂತರ ಈ ಭಾಗವನ್ನು ಆಳಿದ ಪಾಳೆಯಗಾರರ ಆಳ್ವಿಕೆಯ ಕಾಲಕ್ಕೆ ಈ ಶಾಸನವು ಸೇರಿದೆ ಎಂದು ಗುರುತಿಸಲಾಗಿದೆ. ಆ ಕಾಲಘಟ್ಟದಲ್ಲಿ ರಾಜಕೀಯ ಏರುಪೇರುಗಳ ನಡುವೆಯೂ ಕೃಷಿ ಮತ್ತು ಭೂ ಒಡೆತನಕ್ಕೆ ಅಪಾರ ಮೌಲ್ಯವಿತ್ತು.

ಡಿ.ಅಂತಾಪುರವು ಪ್ರಾಚೀನ ಕಾಲದಿಂದಲೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದ ಪ್ರದೇಶವಾಗಿದ್ದು, ಇಲ್ಲಿ ದೊರೆತಿರುವ ಈ ಪುಟ್ಟ ಶಿಲಾಶಾಸನವು ಮಧ್ಯಕಾಲೀನ ಕರ್ನಾಟಕದ ಗ್ರಾಮೀಣ ಸಮಾಜದ ಕಾನೂನು ಹಾಗೂ ನಂಬಿಕೆಗಳ ಪರಂಪರೆಗೆ ಸಾಕ್ಷಿಯಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ