LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಐಪಿಎಲ್ ಫೈನಲ್ ಇಂದು: ಕಪ್ ಯಾರ ಮಡಿಲಿಗೆ?

ಗೆಲ್ಲುವರಾರು? ಆರ್‌ಸಿಬಿಯೋ, ಜಿಟಿಯೋ

Advertisement


ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಕ್ರಿಕೆಟ್ ಹಬ್ಬವಾದ ಐಪಿಎಲ್‌ನ ಮೇಘಾ ಫೈನಲ್. ಎರಡನೇ ಬಾರಿ ಐಪಿಎಲ್ ಕಪ್ ಗೆಲ್ಲಬೇಕೆಂಬ ಮಹೋನ್ನತ ಇಚ್ಛೆಯೊಂದಿಗೆ ಆರ್‌ಸಿಬಿ ಹಾಗೂ ಜಿಟಿ ರೂಪದಲ್ಲಿ ಎರಡು ಬಲಿಷ್ಠ ತಂಡಗಳು ಕಾದಾಟಕ್ಕೆ ಇಳಿಯಲಿವೆ.
ಅತಿ ಸುಂದರವಾದ ನರೇಂದ್ರ ಮೋದಿ ಕ್ರೀಡಾಂಗಣ ಇಂದು ಕ್ರಿಕೆಟ್ ಮದಗಜ ತಂಡಗಳ ಹಣಾಹಣಿಗೆ ಸಾಕ್ಷಿಯಾಗಲಿದೆ.
ಗುಜರಾತ್ ಟೈಟನ್ಸ್ ತಂಡದಲ್ಲಿ ಟಾಪ್-೩ ಬ್ಯಾಟುಗಾರರು ಸ್ವತ: ನಾಯಕ ಶುಭಮಾನ್ ಗಿಲ್, ಭರ್ಜರಿ ಫಾರ್ಮ್ನಲ್ಲಿರುವ ಶಾಯಿ ಸುದರ್ಶನ್ ಹಾಗೂ ವಯಸ್ಸಾಗಿದ್ದರೂ ೧೮ ರ ಹುಡುಗನಂತೆ ಬ್ಯಾಟ್ ಮಾಡುವ ಜೋಶ್ ಬಟ್ಲರ್ ಪ್ರಮುಖರು.
ಇನ್ನು ಪಂದ್ಯ ಕಳೆದಂತೆ ಫಾರ್ಮ್ ಕಂಡುಕೊಳ್ಳುತ್ತಿರುವ ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೇವಾಟಿಯೂ ಕೂಡ ಆರ್‌ಸಿಬಿಗೆ ಮಾರಕವಾಗಬಲ್ಲರು.
ಆರ್‌ಸಿಬಿ ಹೆಚ್ಚು ಬಲಿಷ್ಟ: ಇನ್ನು ಎರಡು ತಂಡಗಳಲ್ಲಿ ಒಂದು ಹೆಜ್ಜೆ ಮುಂದಿರುವ ಆರ್‌ಸಿಬಿಯಂತೂ ಬಲಿಷ್ಟ ಬ್ಯಾಟಿಂಗ್ ಪಡೆ ಹೊಂದಿದೆ.
ವಿರಾಟ್ ಕೊಹ್ಲಿ, ರಜತ್ ಪಟಿದಾರ, ದೇವದತ್ತ ಪಡಿಕಲ್ ಹಾಗೂ ಟಿಮ್ ಡೆವಿಡ್ ಮಾರಕ ಬೌಲಿಂಗ್ ಪಡೆಯನ್ನು ಧ್ವಂಜ ಮಾಡಬಲ್ಲ ಚತುರರು. ಜಿತೇಶ್ ಶರ್ಮಾ, ವೆಂಕಟೇಶ್ ಅಯ್ಯರ್ ಕೂಡ ಆರ್‌ಸಿಬಿಯ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ.
ಇನ್ನು ಬೌಲಿಂಗ್‌ನಲ್ಲಿಯೂ ಉಭಯ ತಂಡಗಳಲ್ಲಿ ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯವಿರುವ ಬೌಲರ್‌ಗಳಿದ್ದಾರೆ.
ಆರ್‌ಸಿಬಿಯಲ್ಲಿ ಸ್ವೀಂಗ್ ಮಾಸ್ಟರ್ ಭುವನೇಶ್ವರ ಕುಮಾರ್, ಬೆಂಕಿ ಚೆಂಡು ಎಸೆಯುವ ಜೋಶ್ ಹೆಜಲ್‌ವುಡ್ ಪ್ರಮುಖರು. ಈ ಬೌಲರುಗಳು ಹಾಗೂ ಜಿಟಿ ತಂಡದ ಗಿಲ್, ಸುದರ್ಶನ್ ಹಾಗೂ ಬಟ್ಲರ್ ನಡುವೆ ಮಹಾ ಕಾಳಗವೇ ನಡೆಯುವ ಸಂಭವ ಇದೆ.
ಜಿಟಿ ತಂಡದಲ್ಲಿಯೂ ಪರಿಣಾಮಕಾರಿ ಬೌಲರ್‌ಗಳಿದ್ದು, ಕಾಗಿಸೋ ರಬಾಡಾ, ಮೊಹ್ಮದ್ ಶಿರಾಜ್ ಹಾಗೂ ಪ್ರಸಿದ್ದ ಕೃಷ್ಣ ಆರ್‌ಸಿಬಿ ಬ್ಯಾಟುಗಾರರನ್ನು ಕಾಡಲಿದ್ದಾರೆ.
ನಿರೀಕ್ಷೆ: ದೊಡ್ಡ ಮೊತ್ತದ ಫೈನಲ್ ನೋಡಲು ಸಿಗುವ ಸಾಧ್ಯತೆ, ಬೌಂಡರಿ ಸಿಕ್ಸರ್‌ಗಳ ಸುರಿಮಳೆಯ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಇಂದು ನರೇಂದ್ರ ಮೋದಿ ಕ್ರಿಡಾಂಗಣ ಮಹಾ  ಕ್ರಿಕೆಟ್ ಕಾಳಗಕ್ಕೆ ಸಾಕ್ಷಿಯಾಗಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST