LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭಾರತ- ಇಂಗ್ಲೆAಡ್ ಸೆಣಸಾಟ ಇಂದು: ಭಾರತಕ್ಕೆ ಜಯವಾಗಲಿ

Advertisement
------------------------------------------------------------------------------ವಿಶ್ವಕಪ್ ಟ್ವೆಂಟಿ-೨೦: ದ್ವಿತೀಯ ಸೆಮಿಫೈನಲ್

ಮುಂಬೈ: ದೇಶದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಶುಭ ಹಾರೈಕೆಯ ನಡುವೆ ಭಾರತ ತಂಡವು ಇಂದು ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆAಡ್ ತಂಡವನ್ನು ಎದುರಿಸಲಿದೆ.
ಇಲ್ಲಿನ ನೂತನ ವಾಂಖೇಡೆ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭ ಗಂಟೆಗೆ ಆರಂಭವಾಗುವುದು. ದೇಶಾದ್ಯಂತ ನಿನ್ನೆಯಿಂದಲೇ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಪೂಜೆ, ಹವನ ನಡೆಸುತ್ತಿದ್ದಾರೆ. ತಂಡ ಗೆದ್ದು ಫೈನಲ್ ತಲುಪಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಸರ‍್ಯಕುಮಾರ್ ನೇತೃತ್ವದ ಭಾರತ ತಂಡವು ಬಲಾಢ್ಯವಾಗಿದ್ದು, ಗೆಲುವಿನ ಉತ್ಸಾಹದಲ್ಲಿದೆ. ತವರು ನೆಲದಲ್ಲೇ ಭಾರತ ಆಡುತ್ತಿರುವುದರಿಂದ ನಮ್ಮ ತಂಡ ಗೆಲ್ಲಲಿ ಎಂಬ ನಿರೀಕ್ಷೆಗಳು ಮುಗಿಲು ಮುಟ್ಟಿವೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಭಾರತ ಬಲಾಢ್ಯವಾಗಿದೆ. ಸಂಜು ಸ್ಯಾಮ್ಸನ್ ಕೂಡ ಫರ‍್ಮ್ಗೆ ಬಂದಿದ್ದು, ಭಾರತಕ್ಕೆ ಖುಷಿ ವಿಚಾರ. ಇನ್ನುಳಿದಂತೆ ಭಾರತದ ಎಲ್ಲ ಬ್ಯಾಟುಗಾರರು ಹಾಗೂ ಬೌಲರುಗಳು ಉತ್ತಮ ಲಯದಲ್ಲಿದ್ದಾರೆ.
ಇನ್ನೊಂದೆಡೆ ಇಂಗ್ಲೆAಡ್ ತಂಡವು ಕೂಡ ಬಲಿಷ್ಠವಾಗಿದ್ದು, ಭಾರತ ಪಡೆ ಗೆಲ್ಲಲು ಸಾಕಷ್ಟು ಬೆವರು ಸುರಿಸಬೇಕಿದೆ. ಕಳೆದ ರಾತ್ರಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಗೆದ್ದಿರುವ ನ್ಯೂಜಿಲೆಂಡ್ ಈಗಾಗಲೇ ಫೈನಲ್ ತಲುಪಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST