LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ- ಇಂಗ್ಲೆAಡ್ ನಾಲ್ಕನೇ ಟ್ವೆಂಟಿ-೨೦ ರಾತ್ರಿ ೧೦ ಗಂಟೆಗೆ

ಸರಣಿ ಸಮವಾದರೂ ಮಾಡಿಕೊಳ್ಳಲು ಗೆಲ್ಲಲೇಬೇಕಿದೆ ಇಂಡಿಯಾ

Advertisement


ಬ್ರಿಸ್ಟೋಲ್(ಇAಗ್ಲೆAಡ್): ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವಿನ ನಾಲ್ಕನೇ ಟ್ವೆಂಟಿ-೨೦ ಪಂದ್ಯ ಇಂದಿಲ್ಲಿನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಭಾರತೀಯ ಕಾಲಮಾನ ರಾತ್ರಿ ೧೦ ಗಂಟೆಗೆ ಪಂದ್ಯ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆAಡ್ ಈಗಾಗಲೇ ಎರಡನೇ ಹಾಗೂ ಮೂರನೇ ಪಂದ್ಯವನ್ನು ಗೆದ್ದು, ೨-೦ ಮುನ್ನಡೆಯಲ್ಲಿದೆ. ಕನಿಷ್ಠ ಸರಣಿಯನ್ನು ೨-೨ ರಿಂದ ಡ್ರಾ   ಮಾಡಿಕೊಳ್ಳಬೇಕೆಂದರೂ ಭಾರತ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಇಂದಿನ ಪಂದ್ಯವನ್ನು ಸೋತರೇ ಭಾರತ ಇಂದೇ ಸರಣಿಯನ್ನು ಕಳೆದುಕೊಳ್ಳಲಿದೆ.
ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿರುವುದರಿಂದ ಸಹಜವಾಗಿಯೇ ಶ್ರೇಯಸ್ ಅಯ್ಯರ ಪಡೆಯ ಮೇಲೆ ಒತ್ತಡ ಇದೆ. ಭಾರತ ತಂಡವು ಇಂಗ್ಲೆAಡ್ ತಂಡವನ್ನು ಸೋಲಿಸುವಷ್ಟು ಸಹಜ ಸಾಮರ್ಥ್ಯ ಹೊಂದಿದೆಯಾದರೂ ಭಾರತದ ಬ್ಯಾಟಿಂಗ್ ಬಲ ತನ್ನ ಸಾಮರ್ಥ್ಯಕ್ಕೆ ತಕ್ಕುದಾಗಿ ಆಡಬೇಕಿದೆ.
ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ ಶರ್ಮಾ ಒಟ್ಟಿಗೆ ಮಿಂಚಬೇಕಿದೆ. ನಾಯಕ ಶ್ರೇಯಸ್ ಅಯ್ಯರ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯ ಹೊರ ಬಂದರೆ ಭಾರತದ ಗೆಲುವು ಕಠಿಣವಲ್ಲ. ಹಾಗಾಗಬೇಕಿದೆಯಷ್ಟೇ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST