LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಪೆಟ್ರೋಲ್, ಸಿಎನ್ ಜಿ, ಔಷಧಿಗಳ ಬೆಲೆಯಲ್ಲಿ ಏರಿಕೆ : ಜನಸಾಮಾನ್ಯರು ಕಂಗಾಲು

Advertisement

ಬೆಂಗಳೂರು: ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ (ಸಿಎನ್ ಜಿ) ಬೆಲೆ ಏರಿಕೆ ಮಾಡಿರುವ ನಡುವೆಯೇ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿದೆ. ಔಷಧಿಗಳ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಜನ ಸಾಮಾನ್ಯರು ಕಂಗಾಲಾಗಿದ್ದಾರೆ.

ದಿನದಿಂದ ದಿನಕ್ಕೆ ಏರುತ್ತಿರುವ ಪ್ರ್ಟ್ರೋಲ್, ಡೀಸೆಲ್, ಇಂಧನ ಬೆಲೆ, ಅಗತ್ಯ ವಸ್ತುಗಳ ದರದ ಜೊತೆಗೆ ಈಗ ಔಷಧಿಗಳ ಬೆಲೆಯೂ ಹೆಚ್ಚಳವಾಗಿದ್ದು, ದುಬಾರಿ ದುನಿಯಾದಲ್ಲಿ ಬದುಕುವುದಾದರೂ ಹೇಗೆ?ಎಂಬ ಆತಂಕ ಎದುರಾಗಿದೆ.

ಬಿಪಿ, ಶುಗರ್, ಕಾರ್ಡಿಯಾಕ್ ಸೇರಿದಂತೆ ದಿನಬಳಕೆಯ ಔಷಧಿಗಳ ಬೆಲೆಯೂ ಶೇ 15 ರಿಂದ 20 ರಷ್ಟು ದುಬಾರಿಯಾಗಿದೆ. ಹಂತ ಹಂತವಾಗಿ ಹೊಸ ಬ್ಯಾಚ್ ನ ಮೆಡಿಸಿನ್ ಗಳ ದರವನ್ನು ಏರಿಸಲಾಗುತ್ತಿದೆ.

ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋ ಕೆಮಿಕಲ್ ಅತ್ಯಗತ್ಯವಾಗಿದ್ದು, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಇದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಹಳೆಯ ಎಂಆರ್‌ಪಿ ದರದಲ್ಲೇ ಔಷಧಿಗಳು ಸಿಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗುವ ಭೀತಿ ಇದೆ ಎಂದು ಮೆಡಿಕಲ್ ವಿತರಕರು ತಿಳಿಸಿದ್ದಾರೆ. ಸಾಗಾಣಿಕೆ ವೆಚ್ಚವೂ ಹೆಚ್ಚುತ್ತಿರುವುದರಿಂದ ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಲಿರುವುದಂತೂ ಖಚಿತವಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST