LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಬಿಲ್ಡರ್ ಗೆ ಹನಿಟ್ರ್ಯಾಪ್ : ಇನ್‌ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ ಅರೆಸ್ಟ್ 

Advertisement
ಅಹಮದಾಬಾದ್ : ಬಿಲ್ಡರ್‌ ಓರ್ವನನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ, ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂ.ಗೆ ನೀಡುವಂತೆ ಬೆದರಿಕೆ ಹಾಕಿ ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಖತರ್ನಾಕ್ ಲೇಡಿಯನ್ನು ಸೂರತ್ ಪೊಲೀಸರು ಅಹಮದಾಬಾದ್‌ನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಇನ್‌ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ ಎಂದು ಗುರುತಿಸಲಾಗಿದೆ. ಸೋಷಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂನಲ್ಲಿ 13 ಲಕ್ಷ ಜನ ಅನುಯಾಯಿಗಳನ್ನು ಹೊಂದಿರುವ ಆಕೆ ಸೂರತ್ ನಲ್ಲಿ ಬಿಲ್ಡರ್ ಓರ್ವನನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿಕೊಂಡಿದ್ದಳು.

ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾ ಕೋಟ್ಯಂತರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಬೇಸತ್ತ ಬಿಲ್ಡರ್ ಸೂರತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಚಾಲಾಕಿ ಲೇಡಿ ತಲೆ ಮರೆಸಿಕೊಂಡಿದ್ದಾಳೆ.

ಬಿಲ್ಡರ್ ನೀಡಿದ ದೂರಿನ ಮೇರೆಗೆ A1 ಆರೋಪಿಯ ಹೊರತಾಗಿ ನಾಲ್ವರ ಹೆಸರನ್ನು ದೂರಿನಲ್ಲಿ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ, ಈ ವೇಳೆ ಸುಲಿಗೆ ಹಾಗೂ ಭೂಕಬಳಿಕೆಯಲ್ಲೂ ಕೂಡ ಕೀರ್ತಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಾದ ಸ್ವಲ್ಪ ಸಮಯದ ನಂತರ ಸೂರತ್ ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಅಲ್ಲದೇ ಆರೋಪಿ ಕೀರ್ತಿಯನ್ನು ಆದಷ್ಟು ಬೇಗ ಬಂಧಿಸುವಂತೆ ಆದೇಶಿಸಿತ್ತು. ಅದರಂತೆ ಪೊಲೀಸರು ವಿಶೇಷ ತಂಡ ರಚಿಸಿ ಆಕೆಯ ಪ್ರತಿ ನಡೆಯ ಮೇಲೆ ಕಣ್ಣಿಟ್ಟಿದ್ದರು.

ಆರೋಪಿಯು ಪೊಲೀಸರ ದಾರಿ ತಪ್ಪಿಸುವುದಕ್ಕಾಗಿ ದಿನೇ ದಿನೇ ಊರು ಬದಲಾಯಿಸುತ್ತಿದ್ದಳು, ಆಗಾಗ ಸಿಮ್ ಕಾರ್ಡ್ ಬದಲಾಯಿಸುವುದನ್ನು ಮಾಡುತ್ತಿದ್ದಳು. ಹೀಗಾಗಿ ಸೈಬರ್ ತಂಡಕ್ಕೂ ಸಿಗದೆ ಯಾಮರಿಸುತ್ತಿದ್ದಳು. ಆದರೆ ಕೊನೆಗೆ ಇನ್‌ಸ್ಟಾಗ್ರಾಂ ಸಹಾಯದಿಂದ ಆರೋಪಿಯನ್ನು ಅಹಮದಾಬಾದ್‌ನ ಸರ್ಖೇಜ್ ನಲ್ಲಿ ಬಂಧಿಸಲಾಗಿದೆ.

ಆರೋಪಿಯ ಕಳೆದ 10 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದು, ಇನ್‌ಸ್ಟಾಗ್ರಾಂ ಸಹಾಯದ ಮೂಲಕ ಆಕೆಯನ್ನು ಕೊನೆಗೂ ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಈ ಹಿಂದೆ ಏಷ್ಟು ಜನರಿಗೆ ಮೋಸ ಮಾಡಿದ್ದಾಳೆ ಎಂಬುವುದನ್ನು ಬಾಯಿಬಿಡಿಸಲಾಗುತ್ತಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ