LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಇನ್ಮುಂದೆ ರೇಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಗೆ ಒಟಿಪಿ ಕಡ್ಡಾಯ 

Advertisement
ನವದೆಹಲಿ: ತತ್ಕಾಲ್ ಟಿಕೆಟ್ ಬುಕಿಂಗ್ ನಲ್ಲಿ ನಕಲಿ ಟಿಕೆಟ್ ತಡೆಯಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ರೈಲ್ವೆ ಇಲಾಖೆ ರಿಸರ್ವೇಷನ್ ಕೌಂಟರ್ ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವವರಿಗೆ ಶೀಘ್ರವೇ ಒಟಿಪಿ ಕಡ್ಡಾಯ ಮಾಡಲಿದೆ.

ಪ್ರಸ್ತುತ 52 ರೈಲುಗಳ ತತ್ಕಾಲ್ ಟಿಕೆಟ್ ಬುಕಿಂಗ್ ನಲ್ಲಿ ಪ್ರಾಯೋಗಿಕವಾಗಿ ಈ ವಿಧಾನ ಚಾಲ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೂ ವಿಸ್ತರಿಸಲಾಗುವುದು.

ರಿಸರ್ವೇಷನ್ ಕೌಂಟರ್ ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ಪ್ರಯಾಣಿಕರ ವಿವರದ ಜೊತೆಗೆ ಕೊಡುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ಈ ಒಟಿಪಿಯನ್ನು ಕೌಂಟರ್ ನಲ್ಲಿರುವ ಸಿಬ್ಬಂದಿಗೆ ನೀಡಬೇಕು. ಅವರು ಕಂಪ್ಯೂಟರ್ ನಲ್ಲಿ ನಮೂದಿಸಿದರೆ ಮಾತ್ರ ಟಿಕೆಟ್ ಬುಕ್ ಆಗುತ್ತದೆ. ಒಟಿಪಿ ಬಾರದಿದ್ದರೆ ಬುಕ್ ಆಗುವುದಿಲ್ಲ.

IRCTC ವೆಬ್ ಸೈಟ್, ಆನ್ ಲೈನ್ ನಲ್ಲಿ ಟಿಕೆ ಬುಕ್ ಮಾಡುವವರಿಗೆ ಒಟಿಪಿ ಇರುವುದಿಲ್ಲ. ಅವರಿಗೆ ಈಗಾಗಲೇ ಆಧಾರ್ ಕಡ್ಡಾಯ ಮಾಡಲಾಗಿದೆ.ಇದು ಕೌಂಟರ್ ಗೆ ಟಿಕೆಟ್ ಗಳಿಗೆ ಮಾತ್ರ ಅನ್ವಯವಾಗಲಿದೆ. ತತ್ಕಾಲ್ ಟಿಕೆಟ್ ಲಭ್ಯತೆ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST