LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆಲಮಟ್ಟಿ ಡ್ಯಾಂನಿಂದ 20 ಗೇಟ್‌ಗಳ ಮೂಲಕ ಭಾರೀ ನೀರು ಬಿಡುಗಡೆ

Advertisement

ಆಲಮಟ್ಟಿ  :  ಡ್ಯಾಂನಿಂದ 20 ಗೇಟ್‌ಗಳ ಮೂಲಕ ಭಾರೀ ನೀರು ಬಿಡುಗಡೆ | ಜಲಾಶಯದಲ್ಲಿ 118.221 ಟಿಎಂಸಿ ನೀರಿನ ಸಂಗ್ರಹ.
ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮ ಮಟ್ಟದಲ್ಲಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 519.32 ಮೀಟರ್ ದಾಖಲಾಗಿದ್ದು, ಒಟ್ಟು 118.221 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 100.601 ಟಿಎಂಸಿ ಲೈವ್ ಸ್ಟೋರೇಜ್ ಇದೆ.

ಕಳೆದ 10 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ ಸರಾಸರಿ 68,525 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಸದ್ಯ ನೀರಾವರಿಗಾಗಿ ಯಾವುದೇ ನೀರು ಬಿಡುಗಡೆ ಮಾಡಲಾಗುತ್ತಿಲ್ಲ. ಆದರೆ ಟ್ಯಾಂಕ್‌ಗಳ ಭರ್ತಿಗಾಗಿ 698 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಇದೇ ವೇಳೆ, ಜಲಾಶಯದ 20 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ಒಟ್ಟು 63,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಕೆಪಿಸಿಎಲ್ ಮೂಲಕ 40,000 ಕ್ಯೂಸೆಕ್ ಹಾಗೂ ಸ್ಪಿಲ್‌ವೇ ಮೂಲಕ 23,500 ಕ್ಯೂಸೆಕ್ ನೀರು ಹರಿಯುತ್ತಿದೆ.

ಹಿನ್ನೀರು, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 415 ಕ್ಯೂಸೆಕ್ ನೀರನ್ನು ಬಳಸಲಾಗುತ್ತಿದೆ. ಒಟ್ಟಾರೆ ಜಲಾಶಯದಿಂದ 64,613 ಕ್ಯೂಸೆಕ್ ನೀರು ಹೊರಹರಿಯುತ್ತಿದೆ.

ಒಳಹರಿವು ಮತ್ತು ಹೊರಹರಿವು ಬಹುತೇಕ ಸಮತೋಲನದಲ್ಲಿರುವುದರಿಂದ ಜಲಾಶಯದ ನೀರಿನ ಮಟ್ಟ ಸ್ಥಿರವಾಗಿದೆ. ಕೃಷ್ಣಾ ನದಿಪಾತ್ರದ ಜನರು ಹಾಗೂ ಮೀನುಗಾರರು ಆಡಳಿತದ ಸೂಚನೆಗಳನ್ನು ಪಾಲಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ವರದಿ : ಅಲಿ ಮಕಾನದಾರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST