LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಉದ್ಯೋಗ ಖಾತ್ರಿ ಕೆಲಸದ ಹಣಕ್ಕೆ ಕತ್ತರಿ

Advertisement

ಸಿಂಧನೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಗಸದೊಡ್ಡಿ, ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ಸರಿಯಾದ ಜಾಬ್ ಕಾರ್ಡ್ ನೀಡಿ ಕೆಲಸ ಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ) ಸಂಘಟನೆ ವಿಭಾಗೀಯ  ಅಧ್ಯಕ್ಷ ಬಸವರಾಜ ಸಾಸಲಮರಿ ಕೃಷಿ ಕೂಲಿಕಾರರಿಗೆ ಕೆಲಸ ಕೊಡುವಂತೆ ಒತ್ತಾಯಿಸಿದ್ದಾರೆ 
 ಅಂಕಸದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೂಲಿ ಪ್ರಧಾನ ಕುಟುಂಬಗಳಿದ್ದು ಅವರು ನಿತ್ಯದ ಜೀವನ ನಡೆಸಬೇಕಾದರೆ ನರೇಗಾ ಯೋಜನೆ ಅಡಿಯಲ್ಲಿ ಬರುವ ಕೂಲಿ
 ಕೆಲಸವನ್ನೇ ಅವಲಂಬಿಸಿದ್ದಾರೆ.

ಆದರೆ ಈ ಯೋಜನೆ ಸರಿಯಾಗಿ ಉಪಯೋಗವಾಗುತ್ತಿಲ್ಲ ಬೇಕಾಬಿಟ್ಟಿ ಕೆಲಸ ಕೊಟ್ಟು ಏಳು ದಿವಸ ಕೆಲಸ ಮಾಡಿಸಿಕೊಂಡು 6 ದಿವಸ ಆಫ್ಸೆಂಟ್  ಹಾಕುತ್ತಿದ್ದಾರೆ ವಾರದಲ್ಲಿ ಒಂದು ದಿವಸ ಕೆಲಸ ಕೊಟ್ಟು ಹಾಜೀರ್ ಹಾಕಿ ಕೂಲಿಕಾರ್ರಿಗೆ ಅನ್ಯಾಯ ಮಾಡುತ್ತಿದ್ದೀರಿ ಇದೇ ರೀತಿ ಅಂಗಸದೊಡ್ಡಿ  ಗ್ರಾಮ ಪಂಚಾಯತಿಯಲ್ಲಿ 400 ಜನ ಕೂಲಿಕಾರರಿಗೆ ಸರಿಯಾದ ಕೆಲಸ ಕೊಟ್ಟಿಲ್ಲ ಹಳ್ಳ ಮತ್ತು ಕೆರೆಯಲ್ಲಿ ಹೂಳೆತ್ತುವ ಕೆಲಸ ಪಂಚಾಯತಿಗೆ ಯಾಕೆ ಬೇಕು ಆ ಕೆಲಸ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಮಾಡಿಸಬೇಕು ಸಂಬಂಧಪಟ್ಟ ಸಿ ಎಸ್. ತಾಲೂಕು ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರಿಯಾದ ಕೆಲಸ ಸಿಗದೇ ಗ್ರಾಮೀಣ ಪ್ರದೇಶದ ಜನರು ಬೆಂಗಳೂರು-ಮಂಗಳೂರು ನಗರಗಳತ್ತ ಕೆಲಸ ಆರಿಸಿಕೊಂಡು ಗುಳ್ಳೆ ಹೋಗುತ್ತಿದ್ದಾರೆ ಇದನ್ನು ತಪ್ಪಿಸಬೇಕಾದರೆ ಗ್ರಾಮ ಪಂಚಾಯಿತಿ ಯಿಂದ ಕೂಲಿಕಾರರಿಗೆ ಕೆಲಸ ಕೊಡಬೇಕು ಸಂಬಂಧಪಟ್ಟ ಸಿ ಎಸ್, ತಾಲೂಕು ಪಂಚಾಯತಿ ಅಧಿಕಾರಿ. ಕೂಡಲೇ ಈ ಬಗ್ಗೆ ನಿಗಾವಹಿಸಿ ಅಂಕಸದೊಡ್ಡಿ, ಮಟ್ಟೂರು,ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿರುವ ಕೂಲಿ ಕಾರರಿಗೆ ಕೆಲಸ ಒದಗಿಸಿ ಕೊಡಬೇಕು ಇಲ್ಲ ಅಂದರೆ ನಮ್ಮ ಸಂಘಟನೆಯಿಂದ ಸಿಎಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗೆರಾವ್ ಹಾಕಬೇಕಾಗುತ್ತೆ ಅಂದರು ಈ ಸಂದರ್ಭದಲ್ಲಿ. ಬಸವರಾಜ ಸಾಸಲಮರಿ. ಈರಪ್ಪ ಕೊಣಕಲ್ಲೂರು. ಮರಿಸ್ವಾಮಿ ಮುದಬಾಳ. ಮತ್ತು ಸ್ಥಳೀಯ ಕೂಲಿ ಕಾರರು ಇದ್ದರು


ವರದಿ:ಬಸಕರಾಜ ಬುಕ್ಕನಹಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST