LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆಕ್ರಮ ಪಡಿತರ ಹಕ್ಕಿ ದಂಧೆ ಕೋರರನ್ನು ಬಂಧಿಸಲು ಡಿಎಸ್ಎಸ್ ಅಗ್ರಹ!

Advertisement

ಸಿಂಧನೂರು : ಗ್ರಾಮೀಣ ಪ್ರದೇಶದಲ್ಲಿ ಆಕ್ರಮ ಪಡಿತರ (ಅನ್ನಭಾಗ್ಯ ಅಕ್ಕಿ) ಮಾರಾಟ ಮತ್ತು ಸಾಗಾಣಿ ಮಾಡುವ ದಂಧೆ ಕೋರರ ಹಾವಳಿ ಹೆಚ್ಚಾಗಿದ್ದು ಸರ್ಕಾರವು ಬಡವರಿಗಾಗಿ ನೀಡುವ ಪಡಿತರವನ್ನು ಕಾಳಸಂತಿಯಲ್ಲಿ ಮಾರಾಟ ಜಾಲಗಳ ವಿರುದ್ಧ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಸಮಿತಿ ಸಿಂಧನೂರು ತಹಸಿಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿ ಕೊಳ್ಳಲಾಯಿತು ಎಂದು ಸಮಿತಿಯ ಸಂಚಾಲಕ ಸಹದೇವ ರಾಘವೇಂದ್ರ ಕ್ಯಾಂಪ್ ತಿಳಿಸಿದರು.

ನಂತರ ಅವರು ಮಾತನಾಡಿ ಪಡಿತರ ದಂಧೆಕೋರರು ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಪಡಿತರ ಹಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ ತಾಲೂಕಿನ ಅಧಿಕಾರಿಗಳ ಕುಮ್ಮಕ್ಕಿನಿಂದ ತುರ್ವಿಹಾಳ, ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಪಡಿತರ ಹಕ್ಕಿ ಸಾಕಾಟ ಜೋರಾಗಿ ಮುಂದುವರೆದಿದ್ದು ನಮ್ಮ ಸಂಘಟನೆಯಿಂದ ಹಲವು ಬಾರಿ ತಾಸಿಲ್ದಾರರು ಹಾಗೂ ಆಹಾರ ನಿರೀಕ್ಷಕರಿಗೆ ಮನವಿ ಕೊಟ್ಟರು ಸಹ ಅಕ್ರಮದಲ್ಲಿ ತೊಡಗಿರುವ ವಿತರಕರು,ಹಾಗೂ ಕಾಳ ಸಂತಿಯಲ್ಲಿ ಸಾಗಾಟ ಪಡಿತರ ಹಕ್ಕಿ ಮಾರಾಟಗಾರರು ವಿರುದ್ಧ ಯಾವುದೇ ಕಾನೂನು ಕ್ರಮ ಜರಗಿಸಿಲ್ಲ ಎಂದು ತಾಸಿಲ್ ಕಚೇರಿಯ ಶಿರಸ್ದಾರ ಅಂಬಾದಾಸ್ ಅವರ ಮುಖಾಂತರ ಮಾನ್ಯ ಆಹಾರ  ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಿಗೆ ಮಾನವಿ ಪತ್ರ ರವಾನಿಸಿದರು.

ಈ ಸಂದರ್ಭದಲ್ಲಿ :  ತಾಲೂಕ ಸಂ.ಸಂಚಾಲಕ ಆನಂದ ತುರುವಿಹಾಳ, ಸಮಿತಿಯ ಮುಖಂಡ ಉಮೇಶ್ ಕಲ್ಮಂಗಿ  ಸದಸ್ಯರಾದ ಹುಲುಗಪ್ಪ ಪೂಜಾರಿ, ಯಮನೂರ ನವಲಹಳ್ಳಿ, ದುರ್ಗಪ್ಪ ಅಡವಿಬಾವಿ, ಶಂಕರ್ ಸೇರಿದಂತೆ ಇನ್ನೂ ಅನೇಕರು ಇದ್ದರು.


ವರದಿ  : ಬಸವರಾಜ ಬುಕ್ಕನಹಟ್ಟಿ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST