LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

30ನೇ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾದ ದಿವ್ಯಾಂಕಾ ಸಿರೋಹಿ 

Advertisement

ದಿವ್ಯಾಂಕಾ ಸಿರೋಹಿ ಹರಿಯಾಣ್ವಿ ಚಿತ್ರರಂಗದ ಜನಪ್ರಿಯ ಮುಖ. ಅವರು 50ಕ್ಕೂ ಹೆಚ್ಚು ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 13 ಲಕ್ಷ ಫಾಲೋವರ್ಸ್‌ ಹೊಂದಿದ್ದರು.


ದಿವ್ಯಾಂಕಾ ಅವರು ಏಪ್ರಿಲ್ 21, 2026 ರಂದು ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಷನ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.


30ನೇ ವಯಸ್ಸಿನಲ್ಲಿ ಅವರ ಈ ಹಠಾತ್ ಸಾವು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ವರದಿಗಳ ಪ್ರಕಾರ, ಬುಧವಾರ ಬೆಳಿಗ್ಗೆ ಗಾಜಿಯಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.


ದಿವ್ಯಾಂಕಾ ಅವರ ಸಹೋದರ ಹಿಮಾಂಶು 'ದೈನಿಕ್ ಭಾಸ್ಕರ್' ಜೊತೆ ಮಾತನಾಡಿ, 'ತನ್ನ ಸಹೋದರಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟು ಕೆಳಗೆ ಬಿದ್ದಳು. ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಯಿತು' ಎಂದು ತಿಳಿಸಿದ್ದಾರೆ.


ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸದ್ಯಕ್ಕೆ, ಸಾವಿನ ಅಧಿಕೃತ ಕಾರಣ ಸ್ಪಷ್ಟವಾಗಿಲ್ಲ. ಕೆಲವು ವರದಿಗಳು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳುತ್ತಿವೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ