LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ದೆಹಲಿಯಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ 

Advertisement

ನವದೆಹಲಿ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಪ್ರಯಾಣಿಸುತ್ತಿದ್ದ ಕಾರು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಶಾಸಕರು ಸೇರಿದಂತೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೆಹಲಿಯ ಹಳೆಯ ಪೊಲೀಸ್ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಶನಿವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ನಡೆದಿದೆ. ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತಕ್ಕೀಡಾದ ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.

ಅಪಘಾತದ ರಭಸಕ್ಕೆ ಎರಡೂ ವಾಹನಗಳಲ್ಲಿದ್ದ ಒಟ್ಟು 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್