LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಅಯೋಧ್ಯೆ ರಾಮಮಂದಿರ : ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ

Advertisement

ಆಯೋಧ್ಯೆ : ಬದಲಾಗುತ್ತಿರುವ ಋತುವಿನ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀರಾಮಲಾಲಾ ಅವರ ದೈನಂದಿನ ಪೂಜೆ, ಆರತಿ, ಭೋಗ ಸಮರ್ಪಣೆ ಹಾಗೂ ಭಕ್ತರ ದರ್ಶನದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. 

ನವೆಂಬರ್ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದ್ದು, ಗರ್ಭಗುಡಿಯ ಬಾಗಿಲು ಬೆಳಗ್ಗೆ 4 ಗಂಟೆಗೆ ತೆರೆಯಲಿದ್ದು, ರಾತ್ರಿ 10 ಗಂಟೆಗೆ ಮುಚ್ಚಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಪೂಜೆ ಮತ್ತು ದರ್ಶನದ ಸಂಚಾರಿ ವೇಳಾಪಟ್ಟಿ

ಪ್ರಸ್ತುತ ಬೆಳಗ್ಗೆ 3.45ಕ್ಕೆ ತೆರೆಯುತ್ತಿದ್ದ ಗರ್ಭಗುಡಿಯ ಬಾಗಿಲು ಇನ್ನು ಮುಂದೆ ಬೆಳಗ್ಗೆ 4 ಗಂಟೆಗೆ ತೆರೆಯಲಿದೆ. ಬೆಳಗ್ಗೆ 4.30ರಿಂದ 4.40ರವರೆಗೆ ಮಂಗಳಾರತಿ ನಡೆಯಲಿದ್ದು, ಬಳಿಕ ಅಭಿಷೇಕ, ಶೃಂಗಾರ, ಧೂಪ, ದೀಪ ಹಾಗೂ ನೈವೇದ್ಯ ಸಮರ್ಪಣೆಗಾಗಿ ಬೆಳಗ್ಗೆ 6.30ರವರೆಗೆ ಗರ್ಭಗುಡಿಯ ಬಾಗಿಲು ಮುಚ್ಚಿರುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ ನಡೆದ ನಂತರ 7 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಬೆಳಗ್ಗೆ 8ರಿಂದ 8.10ರವರೆಗೆ ಬಾಲಭೋಗ ಸಮರ್ಪಣೆಗಾಗಿ ದರ್ಶನ ಸ್ಥಗಿತಗೊಳ್ಳಲಿದೆ. ಬಳಿಕ ಬೆಳಗ್ಗೆ 11.30ರವರೆಗೆ ದರ್ಶನ ಮುಂದುವರಿಯಲಿದೆ. 11.30ರಿಂದ ಮಧ್ಯಾಹ್ನ 12ರವರೆಗೆ ರಾಜಭೋಗ ಸಮರ್ಪಣೆ ನಡೆಯಲಿದ್ದು, ನಂತರ ರಾಜಭೋಗ ಆರತಿ ನೆರವೇರಲಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ