LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಫುಡ್ ಪಾಯಿಸನ್‌ನಿಂದ ಅಮಿತ್ ಶಾ ಅಸ್ವಸ್ಥ: ಪ್ರಲ್ಹಾದ್ ಜೋಶಿ

Advertisement

ಬೆಳಗಾವಿ: ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಆರೋಗ್ಯದಲ್ಲಿ ದಿಢೀರ್ (Health Condition) ಏರುಪೇರು ಉಂಟಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಬಿಜೆಪಿ ಮುಖಂಡರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ವಿಶೇಷ ವಿಮಾನದ ಮೂಲಕ ತಡರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಹಿರಿಯ ನಾಯಕರು ಆತ್ಮೀಯವಾಗಿ ಸ್ವಾಗತಿಸಿದ್ದರು. 

ಆದರೆ, ನಗರಕ್ಕೆ ತಲುಪಿದ ಬಳಿಕ ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ವೈದ್ಯರ ತಂಡದಿಂದ ಅಗತ್ಯ ಚಿಕಿತ್ಸೆ ಪಡೆಯಬೇಕಾಯಿತು.

ಅಮಿತ್ ಶಾ ಅವರ ಅನಾರೋಗ್ಯದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಗೃಹ ಸಚಿವರಿಗೆ ಫುಡ್ ಪಾಯಿಸನ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಆರೋಗ್ಯ ಸಮಸ್ಯೆಯಿಂದಾಗಿ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜೋಲ್ಲೆ ಸಂಸ್ಥೆಯ ಪ್ರಮುಖ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ವೈದ್ಯರ ಸಲಹೆಯಂತೆ ಅವರು ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

 ಪ್ರಸ್ತುತ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಸಂಪೂರ್ಣ ಕ್ಷೇಮವಾಗಿದ್ದಾರೆ. ಆದರೆ, ಆಹಾರ ವ್ಯತ್ಯಾಸದಿಂದಾಗಿ ಕೊಂಚ ನಿಶ್ಯಕ್ತಿ (ವೀಕ್ನೆಸ್) ಇರುವುದರಿಂದ ವೈದ್ಯರು ಅವರಿಗೆ ಹೆಚ್ಚಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಜೋಶಿ ವಿವರಿಸಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್