LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೈತರ ಬೆಳೆವಿಮಾ ಪರಿಹಾರದಲ್ಲಿ ಏಜೆಂಟರುಗಳ ಕೈ ಚಳಕಾ: ಲಕ್ಷ ಲಕ್ಷ ಲೂಟಿ

Advertisement

ಶಿಗ್ಗಾಂವಿ : ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪಸಲ್ ಭೀಮಾ ಯೋಜನೆಯಡಿ ರೈತರಿಗೆ ಬಂದಿರುವ ಮುಂಗಾರು ಬೆಳೆಹಾನಿ ಪರಿಹಾರದಲ್ಲಿ ಕೆಲವೊಂದಿಷ್ಟು ವ್ಯಕ್ತಿಗಳು ರೈತರಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನ ಲೂಟಿ ಮಾಡಿದ್ದು ಕಂಡು ಬಂದಿದೆ 
ಇದರಲ್ಲಿ ಸುಮಾರು ಶಿಗ್ಗಾಂವಿ ತಾಲೂಕಿಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಅನುಮಾನಗಳು ಕೂಡ ಕಂಡುಬರುತ್ತಿವೆ .
ರೈತರ ಜಮೀನಿನ ಮೇಲೆ ನಕಲಿ ಎಫ್ ಐ ಡಿ ಸೃಷ್ಟಿಸಿ ಕೃಷಿ ಇಲಾಖೆ ಶಾಮೀಲು ಮೇರೆಗೆ ಲಕ್ಷಾಂತರ ರೂಪಾಯಿ ಹಣವನ್ನ ಒಬ್ಬರ ಖಾತೆಗೆ ಜಮಾ ಮಾಡಿ ಸರ್ಕಾರದ ಕಣ್ಣಿಗೆ ಮತ್ತು ರೈತರ ಕಣ್ಣಿಗೆ ಮನ್ನೆರೆಚ್ಚುವ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಮುಖ ಜಾನರಂತೆ ವರ್ತನೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ರೈತ ಸಂಘಟನೆಗಳು ಕೂಡ ಒತ್ತಾಯ ಮಾಡುತ್ತಿವೆ .
ಬೆಳೆವಿಮೆಯು ರೈತರ ಖಾತೆಗೆ ಬಾರದೆ ಮಧ್ಯವರ್ತಿಗಳ ಖಾತೆಗೆ ಜಮಾ ಆದ ಕಾರಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

news_1781259740_1_464.webp

 


 ವಿಮೆಹಣದಲ್ಲಿ ರೈತರ ಪಾಲಿಗಿಂತ  ಮಧ್ಯವರ್ತಿಗಳ ಪಾಲು ಜಾಸ್ತಿ ಆಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ರೈತರ ಹೆಸರಲ್ಲಿ ಏಜೆಂಟರು ಗಳು ಲಕ್ಷಾಂತರ ರೂಪಾಯಿ ಹಣವನ್ನ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ನಿಜವಾದ ಫಲಾನುಭವಿಗಳಿಗೆ ಬೆಳೆವಿಮಾ ಹಣ ದೊರಕುತ್ತಿಲ್ಲ ಅದು ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತರಿಗೆ ಮೋಸ ಮಾಡಿ ಮಧ್ಯವರ್ತಿಗಳು ೫೦%೫೦ ಅನುಪಾತದಲ್ಲಿ ಬೆಳೆವಿಮಾ ಹಣ ಲೂಟಿ ಮಾಡುತ್ತಿದ್ದದ್ದು ಕಂಡು ಬಂದಿದೆ.  ಹಾಗೆ ಇನ್ನು ಕೆಲವು ಮಧ್ಯವರ್ತಿಗಳು ಸೇರಿ ರೈತರಿಂದಲೇ ವಿಮಾ ಪಾವತಿಸಿ ಬಂದ ವಿಮಾ ಪರಿಹಾರದಲ್ಲಿ 25% ಹಣ ಕೊಡುವಂತೆ ರೈತರಿಗೆ ಪಿಸುಲಾಯಿಸುತ್ತಿದ್ದಾರೆ. ಈ ಎಲ್ಲ ಅಕ್ರಮಕ್ಕೆ ಕಾರಣಾ ಮೊದಲು ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬಂದ್ಧಿಗಳೇ ಕಾರಣ ವಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಇದರ ಸಂಪೂರ್ಣ ಎಲ್ಲ ಮಾಹಿತಿಯನ್ನ ದಾಖಲೆ ಸಮೇತ ನಿಮ್ಮ್ ಮುಂದೆ ಇಡಲಿದ್ದೇವೆ ಅತಿ ಶೀಘ್ರದಲ್ಲಿ..

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST