LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪುಟ್ಬಾಲ್ ಶ್ರೇಷ್ಠ ಆಟಗಾರ ಜೇಮಿ ನೈಟ್ ಅವರಿಂದ ಫ್ರೀಸ್ಟೈಲ್ ಪುಟ್ಬಾಲ್ ಪ್ರದರ್ಶನ

Advertisement
ಬೆಂಗಳೂರು : ಈಗಿನ ಕಂಪ್ಯೂಟರ್ ಯುಗದಲ್ಲಿ ಶಿಕ್ಷಣ ಜೊತೆಗೆ ವಿವಿಧ ಆಟಗಳನ್ನು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯವರು ಯಾವುದೇ ಕ್ರೀಡೆಯಲ್ಲಿ ಅನುಭವ, ಪರಿಣಿತ ಹೊಂದಿದ ಹಾಗೂ ಶ್ರೇಷ್ಠ ವ್ಯಕ್ತಿಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಪ್ರದರ್ಶನ ಮಾಡುವ ಮೂಲಕ ತಿಳಿಸುವ ಕೆಲಸ ಮಾಡುತ್ತಾರೆ ಎಂದು ಶಾಲೆಯ ಪ್ರಾಂಶುಪಾಲಕಿ ಅನುಭಾ ಮಂತ್ರಿ ಹೇಳಿದರು.

ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕ ಕೊಡಿಗೆಹಳ್ಳಿ ಮಾಗಡಿ ರಸ್ತೆಯ ಸಮೀಪದ ಲ್ಲಿರುವ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ "ಪುಟ್ಬಾಲ್ ಶ್ರೇಷ್ಠ ಆಟಗಾರ ಜೇಮಿ ನೈಟ್ ಅವರಿಂದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುಟ್ಬಾಲ್ ಶ್ರೇಷ್ಠ ಆಟಗಾರ ಜೇಮಿ ನೈಟ್ಸ್ ಅವರು ಮಾತನಾಡಿ ನಾನು ಪ್ರತಿ ವರ್ಷ ನನ್ನನ್ನೂ ಆಹ್ವಾನಿಸಿ ಶಾಲಾ ಮಕ್ಕಳಿಗೆ ನಮ್ಮ ಅನುಭವನ್ನು ಪ್ರದರ್ಶನ ಮಾಡುವ ಮೂಲಕ ಮುದ್ದು ಮಕ್ಕಳ ಜೊತೆಗೆ ಹಂಚಿ ಕೊಳ್ಳುವುದು ಮತ್ತು ಅವರಿಗೆ ಕಲಿಸಿ ಕೊಡುವುದು ಖುಷಿ ತಂದಿದೆ ಎಂದು ಜೇಮಿ ನೈಟ್ಸ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಜನರಲ್ ಮ್ಯಾನೇಜರ್ ಸುರೇಂದ್ರನಾಥ್ ಅವರು ಜೇಮಿ ನೈಟ್ಸ್ ಅವರ ಪುಟ್ಬಾಲ್ ಪ್ರದರ್ಶನ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಕದಾಯಕವಾಗಿದೆ ಕ್ರೀಡೆಗಳಿಂದ ವಿದ್ಯಾರ್ಥಿಗಳ ದೇಹದ ಅಂಗಾಂಗಗಳು ಬಲಗೊಳ್ಳುತ್ತವೆ, ಜ್ಞಾನ ಸಮೃದ್ಧಿ ಮಕ್ಕಳ ಬುದ್ಧಿ ಮಟ್ಟ ಸರ್ವಾಂಗೀಣ ವಿಕಾಸಕ್ಕೆ ನಾಂದಿ ಎಂದು ಸುರೇಂದ್ರನಾಥ್ ಅವರು ಮಾದ್ಯಮ ಮುಂದೆ ಮಾತನಾಡಿದರು.

ಈ ಸಂದರ್ಭದಲ್ಲಿ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯವರು,ಶಾಲಾ ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿ ವೃಂದದವರು ಪೋಷಕರು ವಿದ್ಯಾರ್ಥಿಗಳು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST