LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಲೋಕಸಭೆಯಲ್ಲಿ ಭಾರಿ ಗದ್ದಲ : ಸ್ಪೀಕರ್ ಮೇಲೆ ಕಾಗದ ಎಸೆದ 8 ಸಂಸದರ ಅಮಾನತು

Advertisement
ನವದೆಹಲಿ : ಮಂಗಳವಾರ ಲೋಕಸಭೆಯು ಕಲಾಪಗಳ ಸಮಯದಲ್ಲಿ ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ ಸ್ಪೀಕರ್ ಮೇಲೆ ಕಾಗದಗಳನ್ನ ಎಸೆದ ಎಂಟು ವಿರೋಧ ಪಕ್ಷದ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗದ್ದಲದ ಮಧ್ಯೆ, ಸ್ಪೀಕರ್ ಓಂ ಬಿರ್ಲಾ ಅವರು ಎಂಟು ಸಂಸದರನ್ನ ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಿದರು.

ಈ ಸಂಸದರು ಸ್ಪೀಕರ್ ಕುರ್ಚಿಯ ಬಳಿ ಹೋಗಿ ಕಾಗದಗಳನ್ನ ಎಸೆದಿದ್ದರು. ತೀವ್ರ ಗದ್ದಲದಿಂದಾಗಿ ಇಂದು ಸದನದ ಕಲಾಪಕ್ಕೆ ಅಡ್ಡಿಯಾಯಿತು. ಸಂಸತ್ತನ್ನು ನಾಳೆ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.

ಕೆಲವು ವಿರೋಧ ಪಕ್ಷದ ಸಂಸದರು ಎರಡು ಬಾರಿ ಸ್ಪೀಕರ್ ಕುರ್ಚಿಯ ಕಡೆಗೆ ಕಾಗದಗಳನ್ನು ಎಸೆದರು. ಈ ಸಂಸದರಲ್ಲಿ ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹಿಬಿ ಈಡನ್, ಕಿರಣ್ ರೆಡ್ಡಿ, ವೆಂಕಟ್ ರಾಮನ್ ಮತ್ತು ಮಾಣಿಕ್ಕಮ್ ಟ್ಯಾಗೋರ್ ಬಿ ಸೇರಿದ್ದಾರೆ.

ಸ್ಪೀಕರ್ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಿದರು. ಅದ್ರಂತೆ, ಸಂಸತ್ತಿನ ಬಜೆಟ್ ಅಧಿವೇಶನದ ಉಳಿದ ಅವಧಿಗೆ ನಿಯಮ 3742 ರ ಅಡಿಯಲ್ಲಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST