LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಇಡಿಯಿಂದ ಶಿವಾನಂದ ನೀಲಣ್ಣನವರ್‌ಗೆ ಸೇರಿದ 427.16 ಕೋಟಿ ರೂ. ಆಸ್ತಿ ಜಪ್ತಿ

Advertisement

ಮಂಗಳೂರು: ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶ ನೀಡುವ ನಕಲಿ ಆಮಿಷವೊಡ್ಡಿ (Shivam Scam) ಕೋಟ್ಯಂತರ ರೂಪಾಯಿ ವಂಚಿಸಿದ ಬೃಹತ್ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಿಗಿ ಕ್ರಮ ಕೈಗೊಂಡಿದೆ. ಮಂಗಳೂರು ಇಡಿ ವಿಭಾಗದ ಅಧಿಕಾರಿಗಳು ಈ ಪ್ರಕರಣದ ಮುಖ್ಯ ರೂವಾರಿ ಶಿವಾನಂದ ಸಿದ್ಧಪ್ಪ (Shivananad Neelannavar) ನೀಲಣ್ಣನವರ್ ಹಾಗೂ ಆತನ ಸಹಚರರಿಗೆ ಸೇರಿದ ಬರೋಬ್ಬರಿ 427.16 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ (Provisional Attachment) ಮಾಡಿದ್ದಾರೆ.

ಏನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ?

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ತನಿಖಾ ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ನಗದು ಬಾಕಿ (ಬ್ಯಾಂಕ್ ಬ್ಯಾಲೆನ್ಸ್), ಹೂಡಿಕೆ ಮಾಡಲಾಗಿದ್ದ ಷೇರುಗಳು, ಐಷಾರಾಮಿ ಬಂಗಲೆಗಳು ಹಾಗೂ ವಿಶಾಲವಾದ ಕೃಷಿ ಜಮೀನುಗಳು ಸೇರಿವೆ.

ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ನಂಬಿಕೆ ದ್ರೋಹ ಎಸಗಿದ್ದ ಆರೋಪಿಗಳು, ಆ ಹಣವನ್ನು ಅಕ್ರಮವಾಗಿ ವಿವಿಧ ರಿಯಲ್ ಎಸ್ಟೇಟ್ ಹಾಗೂ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಪ್ರಸ್ತುತ ಜಪ್ತಿ ಪ್ರಕ್ರಿಯೆಯೊಂದಿಗೆ ಇಡಿ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ವಂಚನೆಗೆ ಒಳಗಾದ ಹೂಡಿಕೆದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ