LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಶೇ.15ರಷ್ಟು ಹೆಚ್ಚಳ 

Advertisement
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.

30 ಕೆ.ಜಿ.ಗೂ ಅಧಿಕ ಭಾರದ ಲಗೇಜ್‌ಗೆ ದರ ಅನ್ವಯಿಸುತ್ತದೆ. ಅದಕ್ಕಿಂತ ಕಮ್ಮಿಗೆ ಇಲ್ಲ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ.

ಅದರ ನಂತರದ ಲಗೇಜಿಗೆ ದರ ವಿಧಿಸುವುದಾಗಿ ನಿಗಮ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಕೆ ಎಸ್ ಆರ್ ಟಿ ಸಿ ಬಿಡುಗಡೆ ಮಾಡಿದ್ದು, ಪ್ರತಿ ಬಾರಿಯೂ ಲಗೇಜು ದರ ಏರಿಕೆ‌ ಬಸ್ ಪ್ರಯಾಣ‌ ದರ‌ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆ‌ಯಾಗಿತ್ತು, ಆದರೆ ಲಗೇಜು ದರ‌ ಏರಿಕೆ‌ ಮಾಡಿರಲಿಲ್ಲ. ಆ ಸಂಬಂದ ನಾಳೆಯಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಿದೆ‌ ಎಂದಿದೆಮ

30 kg ವರೆಗೂ ಉಚಿತ,‌ನಂತರ ದರ ಅನ್ವಯಿಸುತ್ತದೆ

ಈ‌ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು. ಈಗ ಏರಿಕೆ ಮಾಡಲಾಗಿದೆ. 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ. ಆ ಬಳಿಕದ ಲಗೇಜ್ ಗೆ ಮಾತ್ರ ನಾಳೆಯಿಂದ ಜಾರಿಯಾಗುವ ಲಗೇಜ್ ದರ ಅನ್ವಹಿಸಲಿದೆ ಎಂದು ತಿಳಿಸಿದೆ.

ಯಾವಾಗಲೂ ಟಿಕೆಟ್ ದರದ ಜೊತೆಗೆ ಲಗೇಜ್ ದರ ಹೆಚ್ಚಾಗುತ್ತಿತ್ತು

ಯಾವಾಗಲೂ ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟೇ ಲಗೇಜು ದರವೂ ಹೆಚ್ಚಾಗುತ್ತದೆ ಅಂದರೆ 15% ಬಸ್ ಪ್ರಯಾಣ ದರ ಹೆಚ್ಚಾಗಿತ್ತು, ಲಗೇಜು ದರವು 15% ಹೆಚ್ಚಾಗಿದೆ. ಅದರಲ್ಲಿ ಹೊಸದೇನು ಹೆಚ್ಚಳವಿಲ್ಲ ಎಂಬುದಾಗಿ ಹೇಳಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ