Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Advertisement
ಹುಮ್ನಾಬಾದ್: -ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶಕ್ಕೆ ತಾಲೂಕಿನ ಕೇಶವ ಮಹಾರಾಜ್,ಡಾ.ಹಸನ್ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಬೀದರ್ ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಡಾ.ಹಸನ್,ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ ನೀಡಿದ್ದನ್ನು ವಿವರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ನಂತರ ಗಣ್ಯರಾದ ಕೇಶವ ಮಹಾರಾಜ್, ಯೋಜನೆಯಿಂದ ತಾಲೂಕ ವ್ಯಾಪ್ತಿಯಲ್ಲಿ ಆಗಿರುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು.ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ಪ್ರಬಂಧಕರಾದ ಅವಿನಾಶ್ ಮೌರ್ಯ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಹಾಗೂ ಅದರ ಅವಶ್ಯಕತೆ ಅನಿವಾರ್ಯತೆಯ ಕುರಿತು ತಿಳಿಸಿದರು.

ನಂತರ ಜಿಲ್ಲಾ ನಿರ್ದೇಶಕರು ಕ್ಷೇತ್ರದ ಹಿನ್ನೆಲೆ,ಸ್ವ-ಸಹಾಯ ಸಂಘದ ಕಲ್ಪನೆ ಪ್ರಾರಂಭದ ಬಗ್ಗೆ,ಸಿಸಿ ಖಾತೆಯಲ್ಲಿ ಆಗುವ ವ್ಯವಹಾರಗಳ ಬಗ್ಗೆ,ತಗಲುವ ಬಡ್ಡಿಯ ಬಗ್ಗೆ.ಸಿ.ಸಿ ಖಾತೆಯ ನಿರ್ವಹಣೆ ಹಾಗೂ ಟರ್ಮ್ ಲೋನ್ ಗೂ ನಿರ್ವಹಣೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಕಚೇರಿಯ BC ವಿಭಾಗದ ಯೋಜನಾಧಿಕಾರಿಗಳು, ಬೀದರ್ ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿಗಳು, ಹುಮ್ನಾಬಾದ್ ಕ್ಷೇತ್ರ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಹಾಗೂ ಯೋಜನಾ ವ್ಯಾಪ್ತಿಯ ಒಕ್ಕೂಟಗಳ ಪದಾಧಿಕಾರಿಗಳು ಹಾಜರಿದ್ದರು.

ವರದಿ:-ಸಜೀಶ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್