ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪತ್ನಿ ಅದ್ಭುತ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಅವರಿಗೆ ಸಂಗೀತ ನಾಟಕ ಅಕಾಡಮಿ 2025ನೇ ಸಾಲಿನ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನ ಘೋಷಣೆ ಮಾಡಿದೆ.
ಸಾಮಾನ್ಯವಾಗಿ ನೃತ್ಯ, ಸಂಗೀತ ಸೇರಿದಂತೆ ವಿವಿಧ ರೀತಿಯ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ಈ ಸ್ಮರಣಾರ್ಥ ಪ್ರಶಸ್ತಿ ಕೊಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡುತ್ತಿರುವ ಹಾಗೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಶಿವಶ್ರೀ ಅವರನ್ನ ಆಯ್ಕೆ ಮಾಡಲಾಗಿದೆ. ಶಿವಶ್ರೀ ಕರ್ನಾಟಕ ಸಂಗೀತ, ಭಜನೆ ಸೇರಿದಂತೆ ಭಕ್ತಿಗೀತೆಗಳನ್ನ ಅದ್ಭುತವಾಗಿ ಹಾಡುತ್ತಾರೆ.
ಇನ್ನು ಅಕಾಡಮಿಯು 1952ರಿಂದ ಪ್ರಶಸ್ತಿಗಳನ್ನ ನೀಡುತ್ತಿದೆ. ಈ ಪ್ರಶಸ್ತಿಯಲ್ಲಿ ಅಕಾಡಮಿಯು ಫೆಲೋಶಿಪ್ ಎಂದು ಮೂರು ಲಕ್ಷ, ಅಕಾಡಮಿಯ ಪ್ರಶಸ್ತಿ ಎಂದು ಸುಮಾರು 1 ಲಕ್ಷ ಹಾಗೂ ಇದರ ಜೊತೆಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಬಹುಮಾನ 25 ಸಾವಿರ ನೀಡಲಾಗುತ್ತದೆ. ಇದರ ಜೊತೆಗೆ ತಾಮ್ರಪತ್ರ, ಅಂಗವಸ್ತ್ರಗಳನ್ನ ಸಹ ಕೊಡಲಾಗುತ್ತದೆ

