ಭಾರತ ಟ್ವೆಂಟಿ-೨೦ ಕ್ರಿಕೆಟ್ ತಂಡಕ್ಕೆ ಸುಧೀರ್ಘ ಅವಧಿಗೆ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಬಲ್ಲ ಆಟಗಾರನ ತಲಾಶದಲ್ಲಿ ಭಾರತ ಆಯ್ಕೆ ಮಂಡಳಿ ಇದೆ. ಈ ಸ್ಥಾನಕ್ಕೆ ಶ್ರೇಯಸ್ ಅಯ್ಯರ ಟ್ವೆಂಟಿ-೨೦ ತಂಡದ ಸಾರಥ್ಯ ವಹಿಸಿಕೊಳ್ಳುವವರ ಸಾಲಿನಲ್ಲಿ ಪ್ರಮುಖರಾಗಿದ್ದಾರೆ.
ತಿಲಕ್ ವರ್ಮಾ ಹಾಗೂ ಇಶಾನ್ ಕಿಶನ್ ಕೂಡ ಟ್ವೆಂಟಿ-೨೦ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಬಲ್ಲ ಆಟಗಾರರಿದ್ದು, ಆ ಆಟಗಾರರ ಬಗ್ಗೆಯೂ ಆಯ್ಕೆ ಮಂಡಳಿ ಚಿಂತನೆ ನಡೆಸಿದೆ.
ಭಾರತ ತಂಡ ಮುಂಬರುವ ಟ್ವೆಂಟಿ-೨೦ ಸರಣಿಗಳಿಗಾಗಿ ಇಂಗ್ಲೆAಡ್ ಹಾಗೂ ರ‍್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಆ ಸರಣಿಗೆ ಶ್ರೇಯಸ್ ಅಯ್ಯರ ನಾಯಕನಾಗುವ ಸಾಧ್ಯತೆ ಇದೆ. ಸದ್ಯ ಸೂರ್ಯಕುಮಾರ್ ಯಾದವ್ ಟ್ವೆಂಟಿ-೨೦ ತಂಡದ ನಾಯಕತ್ವ ವಹಿಸಿದ್ದು, ಈಚೆಗೆ ಮುಗಿದ ವಿಶ್ವಕಪ್ ಟ್ವೆಂಟಿ-೨೦ ಸರಣಿಯಲ್ಲೂ ಕೂಡ ಸರ‍್ಯಕುಮಾರ್ ಅವರೇ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು.
ಆದರೆ ಸೂರ್ಯಕುಮಾರ್ ಬ್ಯಾಟಿಂಗ್‌ನಿAದ ಸತತವಾಗಿ ಉತ್ತಮ ಸಾಧನೆ ತೋರಲು ಕಷ್ಟವಾಗುತ್ತಿರುವ ಕಾರಣ ಅವರನ್ನು ನಾಯಕತ್ವ ಜವಾಬ್ದಾರಿಯಿಂದ ಕೈ ಬಿಡಲು ಚಿಂತನೆ ನಡೆಸಲಾಗುತ್ತಿದೆಯಂತೆ.

