LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೊಡ್ಡಹಟ್ಟಿಯಲ್ಲಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಟೂರ್ನಿ ಉದ್ಘಾಟನೆ 

ಕ್ರೀಡಾಸ್ಪೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ : ದೊಡ್ಡಾಘಟ್ಟ ಚಂದ್ರೇಶ್

Advertisement

ತುರುವೇಕೆರೆ : ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತವರು ಕುಗ್ಗದೆ ಗೆದ್ದವರು ಬೀಗದೆ ಕ್ರೀಡಾಸ್ಪೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು. 

ತಾಲ್ಲೂಕಿನ ದಂಡಿನಶಿವರ ಹೋಬಳಿ ದೊಡ್ಡಹಟ್ಟಿ ಗ್ರಾಮದ ಎಸ್.ಕೆ.ಎಸ್. ಕ್ರಿಕೆರ್ಸ್ ವತಿಯಿಂದ 10 ನೇ ವರ್ಷದ ಟೆನ್ನಿಲ್ ಬಾಲ್ ಕ್ರಿಕೆಟ್ ಲೀಗ್ ಟೂರ್ನಿಮೆಂಟಲ್ಲಿ ಬ್ಯಾಟಿಂಗ್ ಮಾಡಿ ಯುವಕರಲ್ಲಿ ಸ್ಪೂರ್ತಿ ತುಂಬುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯನ್ನು ಹೊರಹಾಕುವುದಕ್ಕೆ ಇಂತಹ ವೇದಿಕೆಗಳು ಅತ್ಯಗತ್ಯ. 10 ನೇ ತರಗತಿ ಫೇಲ್ ಆಗಿದ್ದ ಸಚಿನ್ ತೆಂಡೂಲ್ಕರ್ ತನ್ನಲ್ಲಿದ್ದ ಅಪ್ರತಿಮ ಕ್ರಿಕೆಟ್ ಕೌಶಲ್ಯದಿಂದ ಇಂದು ವಿಶ್ವ ಮಟ್ಟದಲ್ಲಿ ಕ್ರಿಕೆಟ್ ದೇವರು ಎನಿಸಿಕೊಳ್ಳಲು ಸಾಧ್ಯವಾಯಿತು. 3ನೇ ತರಗತಿಯಷ್ಟೇ ಓದಿದ್ದ ಮುತ್ತುರಾಜ್ ತಮ್ಮ ಕಲಾ ಕೌಶಲ್ಯದಿಂದ ಕನ್ನಡ ನಾಡಿನಲ್ಲಿ ಡಾ.ರಾಜ್ ಕುಮಾರ್ ಆಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಯುವ ಸಮೂಹ ತಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚುವ ಕೆಲಸವನ್ನು ಮಾಡಬೇಕು ಎಂದರು.

ಇಂದು ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ವ್ಯಕ್ತಿಯ ಮಾನಸಿಕ, ದೈಹಿಕ ಆರೋಗ್ಯಕ್ಕೆ ಬಹಳ ಸಹಕಾರಿಯಾದುದು. ಅಲ್ಲದೆ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಯಶಸ್ಸನ್ನು ಸಾಧಿಸಬೇಕಾದರೆ ತಮ್ಮ ಗಮನ ಗುರಿಯೆಡೆಗೆ ಇರಬೇಕು. ಗುರಿ ಸಾಧಿಸುವ ಹಾದಿಯಲ್ಲಿ ಬರುವ ಸೋಲು, ಅವಮಾನ ಎಲ್ಲವನ್ನೂ ಬದಿಗೆ ಸರಿಸಿ ಸನ್ಮಾನ, ಯಶಸ್ಸಿನೆಡೆಗೆ ದಾಪುಗಾಲಿಟ್ಟಾಗ ಮಾತ್ರ ಸಾಧಕನಾಗಲು ಸಾಧ್ಯ ಎಂದರು. 

ಎಸ್.ಕೆ.ಎಸ್. ಕ್ರಿಕೆರ್ಸ್ ವತಿಯಿಂದ ದೊಡ್ಡಾಘಟ್ಟ ಚಂದ್ರೇಶ್ ಅವರನ್ನು ಸನ್ಮಾನಿಸಲಾಯಿತು. ದೊಡ್ಡಹಟ್ಟಿ ಗ್ರಾಮದ ಸ್ವಾಮಿ, ಶಾಂತಕುಮಾರ್, ಮಹಲಿಂಗಣ್ಣ, ರವೀಶ್, ಪ್ರದೀಪ್, ಜಗದೀಶ್, ಕಾಂತರಾಜು, ನಾಗರಾಜು, ಎಸ್.ಕೆ.ಎಸ್. ಕ್ರಿಕೆರ್ಸ್ ನ ಪದಾಧಿಕಾರಿಗಳು, ಗ್ರಾಮಸ್ಥರು, ವಿವಿಧ ಗ್ರಾಮಗಳ ಕ್ರಿಕೆಟ್ ತಂಡದ ಆಟಗಾರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು, ಫಾರ್ಮ್-9 ಮತ್ತು ಫಾರ್ಮ್-11 ವಿತರಣೆಯಲ್ಲಿ ಸಾರ್ವಜನಿಕ  ಆಕ್ರೋಶ ಅಂಗನವಾಡಿ ಕೇಂದ್ರಗಳು, ರಸಗೊಬ್ಬರ ವಿತರಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ : ಸಂತೋಷ ಲಾಡ್ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲು