LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಂದಾಯ ನೌಕರರ ಸಮಸ್ಯೆಗಳ ನಿವಾರಣೆಗೆ ಜಿಲ್ಲಾಧ್ಯಕ್ಷ ನರಸಿಂಹರಾಜು ಭರವಸೆ

Advertisement
ಪಾವಗಡ :ಪಟ್ಟಣದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಬಳಿ ಸಾಯಂಕಾಲ ಕಂದಾಯ ಇಲಾಖೆ ನೌಕರರ ಸಂಘದ ಸಭೆ ಜಿಲ್ಲಾಧ್ಯಕ್ಷ ನರಸಿಂಹರಾಜು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ಜಿಲ್ಲಾಧ್ಯಕ್ಷರಾದ ನರಸಿಂಹರಾಜು ಅವರು, ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಎದುರಾಗಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

​ಜಿಲ್ಲಾ ಪದಾಧಿಕಾರಿಗಳ ತಂಡವು ಪಾವಗಡ ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯ ಕಂದಾಯ ನೌಕರರು ಹಾಗೂ ಗ್ರಾಮ ಸಹಾಯಕರೊಂದಿಗೆ ಸಮಾಲೋಚನೆ ನಡೆಸಲಾಯಿತು.



ಈ ವೇಳೆ ನೌಕರರು ತಾವು ಎದುರಿಸುತ್ತಿರುವ ಪ್ರಮುಖ ಸವಾಲುಗಳ ಬಗ್ಗೆ ಜಿಲ್ಲಾಧ್ಯಕ್ಷರ ಮುಂದೆ ಸುದೀರ್ಘವಾಗಿ ಚರ್ಚಿಸಿದರು.

ಪಾವಗಡ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ನೌಕರರು ಅನುಭವಿಸುತ್ತಿರುವ ಅತಿಯಾದ ಕೆಲಸದ ಒತ್ತಡ ಮತ್ತು ಇಲಾಖೆಯ ಆಂತರಿಕ ಸಮಸ್ಯೆಗಳ ಬಗ್ಗೆ ಪದಾಧಿಕಾರಿಗಳು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದರು.

​ನೌಕರರ ನ್ಯಾಯಬದ್ಧ ಬೇಡಿಕೆಗಳನ್ನು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮತ್ತು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ನೌಕರರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಹಾಗೂ ಸಂಘಟನೆಯನ್ನು ಮತ್ತಷ್ಟು ಶಕ್ತಿಯುತಗೊಳಿಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಜಿಲ್ಲಾಧ್ಯಕ್ಷರು ಕರೆ ನೀಡಿದರು.

​ ಕಂದಾಯ ಇಲಾಖೆಯ ಮೂಲ ಹಂತದ ಕೆಲಸಗಾರರಾದ ಗ್ರಾಮ ಸಹಾಯಕರ ಸಂಘದ ಸದಸ್ಯರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ವಿಶೇಷ ಗಮನಹರಿಸಲಾಯಿತು.

ಈ ​ ವೇಳೆಯಲ್ಲಿ ಈ ಸಭೆಗೆ ಭಾಗವಹಿಸಿದವರು. ಗ್ರಾಮ ಆಡಳಿತ ಅಧಿಕಾರಿ ಜಿಲ್ಲಾ ಅಧ್ಯಕ್ಷ ದೇವರಾಜು. ರಾಜ್ಯ ಪ್ರಧಾನ ಜಂಟಿ ಕಾರ್ಯದರ್ಶಿ ರಂಜಿತ್ ಕುಮಾರ್. ಕಂದಾಯ ಇಲಾಖೆಯ ನೌಕರ ಸಂಘಕ್ಕೆ ತಾಲೂಕ್ ಘಟಕ ಅಧ್ಯಕ್ಷ ಕಿರಣ್ ಕುಮಾರ್.ಕಂದಾಯ ಇಲಾಖೆ ನೌಕರರ ಸಂಘಕ್ಕೆ ನಿರ್ದೇಶಕರಗಳರಾದ. ಶಿರಸ್ತೆದಾರ್ ಚಂದ್ರಶೇಖರ್. ಆರ್ ಐ ರಾಜಗೋಪಾಲ್. ರಾಜೇಶ್. ಸಂಘದ ಪದಾಧಿಕಾರಿಗಳು, ಮತ್ತು ಗ್ರಾಮ ಸಹಾಯಕರ ಸಂಘದ ಸದಸ್ಯರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು .

ವರದಿ:ಶಿವಾನಂದ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್