LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬದ ನಿಮಿತ್ತವಾಗಿ ಹಣ್ಣು ವಿತರಣೆ

Advertisement

ಚಿಕ್ಕೋಡಿ : ಸದಾಕಾಲ ಕನ್ನಡ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಕ್ಕಾಗಿ, ದಶಕಗಳಿಂದ ಹೋರಾಟ ನಡೆಸುತ್ತ ಬಂದಿರುವ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರ, 60 ನೇ ಹುಟ್ಟು ಹಬ್ಬದ ನಿಮಿತ್ತವಾಗಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ, ಚಿಕ್ಕೋಡಿ ತಾಲ್ಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಅವರ ನೇತೃತ್ವದಲ್ಲಿ, ಹಣ್ಣು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ನಾರಾಯಣ ಗೌಡರು ನೆಲ, ಜಲ, ಗಡಿ ವಿಷಯದಲ್ಲಿ ಕನ್ನಡಿಗರಿಗೆ ಅನ್ಯಾಯ ಆದರೆ ತಕ್ಷಣ ಹೋರಾಟ ಮಾಡಿ, ಕನ್ನಡಿಗರಿಗೆ ಅನ್ಯಾಯ ಆಗದಂತೆ ನೋಡುತ್ತ ಬಂದಿದ್ದಾರೆ, ಇವರ ಹೋರಾಟವು ಕನ್ನಡ ಮನಸ್ಸುಗಳಿಗೆ ಕೊಡುಗೆಯಾಗಿದೆ, ಇವರಿಗೆ ದೇವರು ಆಯುರಾರೋಗ್ಯ ನೀಡಿ, ದೀರ್ಘಾಯುಷ್ಯ ನೀಡಲಿ ಎಂದು ಹೇಳಿದರು.

news_1781157206_0_277.webp

 

ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ನಾರಾಯಣ ಗೌಡರು ಕನ್ನಡ ನಾಡಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು, ಇವರ ಹುಟ್ಟು ಹಬ್ಬದ ನಿಮಿತ್ಯ ನಾವು ಪ್ರತಿ ವರ್ಷ ರಕ್ತದಾನ, ಶಾಲಾ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಿಸುವುದು ಹೀಗೆ ಹತ್ತು ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ, ಈ ವರ್ಷ ಆಸ್ಪತ್ರೆಯಲ್ಲಿ ಹಣ್ಣು ವಿತರಿಸುವ ಮೂಲಕ, ಗೌಡರ ಆಯಸ್ಸು, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಅಮೂಲ ನಾವಿ, ಅನೀಲ ನಾವಿ, ರಫೀಕ್ ಪಠಾಣ, ರುದ್ರಯ್ಯಾ ಹಿರೇಮಠ, ಡಾ. ವರ್ಧಮಾನ ಬದನಿಕಾಯಿ, ಡಾ. ವಿಶಾಲ ಹಡಪದ, ರಮೇಶ ಡಂಗೇರ, ಸಚೀನ ದೊಡ್ಡಮನಿ, ಶುಭಂ ಕದಮ, ಸುರೇಶ ಮಾನೆ, ರಾಜೇಂದ್ರ ಕಾಂಬಳೆ, ಸತ್ಯಪ್ಪಾ ಕಾಂಬಳೆ, ಸೋಮೇಶ ಮಿರ್ಜೆ, ಮಲ್ಲಪ್ಪಾ ಡೋನವಾಡೆ, ಸುನೀಲ ತೇರದಾಳೆ, ಭೀಮಾ ಶಿರಗಾವೆ, ಖಾನಪ್ಪಾ ಬಾಡಕರ, ಶಿವಾಜಿ ಖಾಡೆ, ಸಂಜಯ ಬೇವಿನಗಿಡದ, ಮಲ್ಲಿಕಾರ್ಜುನ ಕರೋಶಿ, ಯಾಶೀನ ಜಮಾದಾರ ಸೇರಿದಂತೆ ನೂರಾರು ಕನ್ನಡ ಸೇನಾನಿಗಳು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ