ಮೊಳಕಾಲ್ಮೂರು: ತಾಲೂಕಿನ ಸ್ವಕುಳಸಾಳಿ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ರಾಂಪುರದಲ್ಲಿರುವ ಶಾಸಕರ ನಿವಾಸಕ್ಕೆ ಭೇಟಿ ನೀಡಿ, ಮುಂದಿನ ಸಚಿವ ಸಂಪುಟದಲ್ಲಿ ಶ್ರೀ ಎನ್. ವೈ. ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ದೊರೆಯಲೆಂದು ಹೃತ್ಪೂರ್ವಕ ಶುಭ ಕೋರಿದರು. ಸತತವಾಗಿ ಏಳು ಬಾರಿ ವಿಧಾನಸಭಾ ಸದಸ್ಯರಾಗಿ ಮತ್ತು ವಿದಾನ ಸಭೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಜಾತಿ ರಾಜಕಾರಣ ಮಾಡದೆ ಎಲ್ಲಾ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ . ಹಿರಿಯ ಶಾಸಕರಾಗಿದ್ದು ಸಚಿವ ಸ್ಥಾನಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ಪ್ರಾತಿನಿಧ್ಯ ಸಿಗಲೆಂದು ಶುಭ ಹಾರೈಸಿದರು. ಪಕ್ಷಾತೀತವಾಗಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಒಬ್ಬರಾದ ಶ್ರೀಯುತ ಎನ್ ವೈ ಗೋಪಾಲಕೃಷ್ಣ ಸಚಿವ ಸ್ಥಾನ ನೀಡಲು ಮಾನ್ಯ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗಾಯಕ್ವಾಡ್ ನರೇಂದ್ರ, ರವೀಂದ್ರನಾಥ್ ಕಾಂಬಳೆ, ಗಿರೀಶ್ ಪಾಣಿಬಾತೆ, ರಮೇಶ್ ಪಾಣಿಭಾತೆ, ಗಾಯಕ್ವಾಡ್ ಪಾರ್ಥ ಸಾರಥಿ ,ಡಿ ಎಚ್ ಶ್ರೀನಿವಾಸ್, ಅಶೋಕ್ ಟಿ ಎಂ, ಶ್ರೀ ಶಿವಾಜಿ ವಾಂಜರೆ, ರಮೇಶ್ ವಾಂಜರೆ, ದುರ್ಗಾದೇವಿ ಮಹಿಳಾ ಮಂಡಳಿಯ ಶ್ರೀಮತಿ ವನಿತಾ, ಕುಮಾರಿ ಸಾಗರಿಕ, ಶ್ರೀಮತಿ ಅನಿತಾ, ಶ್ರೀಮತಿ ಗಾಯತ್ರಿ ದೇವಿ, ಶ್ರೀಮತಿ ಕಮಲ, ಶ್ರೀಮತಿ ಕಲ್ಯಾಣಿ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಮೊಳಕಾಲ್ಮುರು ಪಟ್ಟಣದ ಸರ್ವೋದಯ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು ಸಹ ಭಾಗವಹಿಸಿ, ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಅವರ ನಾಯಕತ್ವ ಮತ್ತಷ್ಟು ಬಲವಾಗಲೆಂದು ಆಶಯ ವ್ಯಕ್ತಪಡಿಸಿದರು. ಜನರ ವಿಶ್ವಾಸ, ಹಿರಿಯತೆ ಹಾಗೂ ಅನುಭವಕ್ಕೆ ತಕ್ಕ ಗೌರವವಾಗಿ ಸಚಿವ ಸ್ಥಾನ ಸಿಗಲೆಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು, ಸ್ವಕುಳ ಸಾಳಿ ಸಮಾಜದ ಜನರ ಪ್ರೀತಿಗೆ ಮತ್ತು ವಿಶ್ವಾಸಕ್ಕೆ ಧನ್ಯವಾದ ತಿಳಿಸುತ್ತಾ, ತಮ್ಮ ಸುದೀರ್ಘ ಕಾಲದ ಜನಸೇವೆಯು ಗುರುತಿಸಲ್ಪಟ್ಟು ಸರ್ಕಾರ ದಲ್ಲಿ ಸಚಿವ ಸ್ಥಾನ ಸಿಕ್ಕರೆ, ಖಂಡಿತವಾಗಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತವಾಗಿ, ಎಲ್ಲಾ ಜಾತಿ ಮತ್ತು ಸಮುದಾಯದವರ ಬೆಂಬಲದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.


